ಚಿಕ್ಕಮಗಳೂರು l ಧರ್ಮಸ್ಥಳ ಪ್ರಕರಣ: ನ್ಯಾಯಯುತ ತನಿಖೆ, ಸಾಕ್ಷಿದಾರನಿಗೆ ಸೂಕ್ತ ರಕ್ಷಣೆ ಕೊಡಬೇಕು; ಕರ್ನಾಟಕ ಜನಶಕ್ತಿ ಆಗ್ರಹ

Date:

Advertisements

ಧರ್ಮಸ್ಥಳದ ಪ್ರಕರಣ ಎಸ್.ಐ.ಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಲೀ, ನೊಂದವರಿಗೆ ನ್ಯಾಯ ಸಿಗಬೇಕೆಂದು ಚಿಕ್ಕಮಗಳೂರು ನಗರದಲ್ಲಿ ಕರ್ನಾಟಕ ಜನಶಕ್ತಿ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಲಾಗಿದೆ.

ಧರ್ಮಸ್ಥಳದಲ್ಲಿ 2012 ರಲ್ಲಿ ನಡೆದ ಸೌಜನ್ಯ ಎಂಬ ಹುಡುಗಿಯ ಮೇಲಿನ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತು ವೇದವಲ್ಲಿ, ಪದ್ಮಲತಾ, ಅನನ್ಯಭಟ್ ಪ್ರಕರಣ ಮತ್ತು ನಾರಾಯಣ, ಯಮುನ, ಮತ್ತು ಇನ್ನಿತರ ಮಹಿಳೆಯರ ನಾಪತ್ತೆ ಇವೆಲ್ಲರೂ ಒಳಗೊಂಡಂತೆ ಈಗ ತನಿಖೆಗಾಗಿ ಎಸ್.ಐ.ಟಿ ವಿಶೇಷ ತನಿಖಾ ತಂಡ ರಚನೆಯಾಗಿದೆ. 

ಹಾಗೆಯೇ, ನೂರಾರು ಶವವನ್ನು ಹೂತು ಹಾಕಿದ್ದೇನೆ ಎಂದು ಸಾಕ್ಷಿ ಹೇಳಲು ಮುಂದಾಗಿರುವ ವ್ಯಕ್ತಿಗೆ ಸೂಕ್ತ ರಕ್ಷಣೆ ಕೊಡಬೇಕು. ಹಾಗೆಯೇ, ಈ ಕೊಲೆಗಳನ್ನು ಮಾಡಿದ್ಯಾರೂ ಅನ್ನುವುದು ಕೂಡಾ ಬಹಳ ಮುಖ್ಯವಾಗಿದೆ. ಅದಲ್ಲದೆ ಆ ವ್ಯಕ್ತಿ ಧರ್ಮಸ್ಥಳದ ಉದ್ಯೋಗಿ ಆಗಿದ್ದೆ ಎಂಬುದರ ಬಗ್ಗೆ ಗುರುತಿನ ಚೀಟಿ ಮತ್ತು ಆಧಾರ್‌ಕಾರ್ಡ್ ಇರುವುದಾಗಿ ಹೇಳಿಕೆ ನೀಡುರವ ಬಗ್ಗೆ ಎಲ್ಲಾ ಮಾಧ್ಯಮಗಳು ಪ್ರಚಾರ ಮಾಡಿದೆ. ಆದ್ದರಿಂದ ಆ ವ್ಯಕ್ತಿಗೆ ಜೀವಕ್ಕೆ ಅಪಾಯ ಇರುವುದು ಕಂಡು ಬರುತ್ತದೆ.

Advertisements

ಅದಲ್ಲದೆ ಧರ್ಮಸ್ಥಳ ಒಂದು ದೊಡ್ಡ ಧಾರ್ಮಿಕ ಸ್ಥಳವಾಗಿದ್ದು, ಹಾಗೂ ಅದರ ನಿಯಂತ್ರಣದಲ್ಲಿ ಸಾಕಷ್ಟು ಶಿಕ್ಷಣ ಕೇಂದ್ರ ಸಹ ಇರುತ್ತದೆ. ಅತ್ಯಾಚಾರ, ಕೊಲೆ ಎಲ್ಲವೂ ಸುದ್ದಿ ಆದಾಗ ಬರುವ ಭಕ್ತಾಧಿಗಳಿಗೂ ಅಲ್ಲಿಯ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಕೂಡಾ ಭಯ ಆತಂಕ ಪಡುತ್ತಾರೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿಯ ಸದಸ್ಯರಾದ ಗೌಸ್ ಮೋಹದ್ದಿನ್ ತಿಳಿಸಿದರು.

ಈ ತನಿಖೆಯು ಅತ್ಯಂತ ತ್ವರಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆದು, ಸತ್ಯ ಜನರಿಗೆ ಗೊತ್ತಾಗಬೇಕಾಗಿದೆ. ಮತ್ತು ಯಾವುದೇ ಸಾಕ್ಷಿ ನಾಶವಾಗದಂತೆ  ಡಾ. ಪ್ರಣವ್ ಮೆಹಾಂತಿ (ಐ.ಪಿ.ಎಸ್) ಅವರ ನೇತೃತ್ವದಲ್ಲಿ ನಡೆಯುವ ವಿಶೇಷ ತಂಡದ ತನಿಖಾ ವರಧಿ ಆದಷ್ಟು ಬೇಗ ಬಂದು ನೊಂದವರಿಗೆ ಕಾನೂನುಬದ್ದ ಶಿಕ್ಷೆಯಾಗಬೇಕೆಂದು ಹಾಗೂ ಕೊಲೆಗಟುಕರಿಗೆ ಕಾನೂನು ಶಿಕ್ಷೆಯಾಗಬೇಕೆಂದು ತನಿಖಾ ತಂಡಕ್ಕೆ ಹಾಗೂ ಸರ್ಕಾರಕ್ಕೆ ಒತ್ತಾಯ ಪೂರ್ವಕ ಆಗ್ರಹ ಮನವಿ ಮಾಡುತ್ತೇವೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಗೌಸ್ ಮೋಹದ್ದಿನ್ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ವೀಣಾ, ಸಂದೀಪ್, ಅಶೋಕ್, ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡರಾದ ಗಣೇಶ್, ಅರುಣ ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X