ಆನೆ ದಾಳಿಯಿಂದ ವೃದ್ದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ, ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರಂಬಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ವೃದ್ದ ಎಲಿಯಾಸ್ ಎಲೆಕುಂಜು(64) ಕಾಡಾನೆ ದಾಳಿಗೆ ಸ್ಥಳದಲ್ಲಿ ಮೃತ ಪಟ್ಟಿದ್ದಾರೆ. ಆರಂಬಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಎಲಿಯಾಸ್ ಎಲೆಕುಂಜು ಮತ್ತು ಮಗ ಇಂದು ಬೆಳಗ್ಗೆ ಕಾಡಿಗೆ ಹೋಗಿದ್ದ ಸಮಯದಲ್ಲಿ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ.
ಆನೆ ದಾಳಿಯಿಂದ ತಪ್ಪಿಸಿಕೊಂಡ ಮಗ ಧಾವಿಸಿ ಓಡಿ ಬಂದಿದ್ದು, ಜೀವ ಉಳಿಸಿಕೊಂಡಿದ್ದರೆ, ತಂದೆ ಸಾವನ್ನಪ್ಪಿದ್ದಾರೆ. ನರಸಿಂಹರಾಜಪುರ ತಾಲೂಕಿನಲ್ಲಿ ಒಂದೇ ತಿಂಗಳಿಗೆ ಇಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆನೆ ದಾಳಿ; ಓರ್ವ ವ್ಯಕ್ತಿ ಸಾವು
ಆನೆ ದಾಳಿಯಿಂದ ವೃದ್ದ ಮೃತ ಪಟ್ಟಿರುವುದನ್ನು ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆನೆ ದಾಳಿಯಿಂದ ಸ್ಥಳೀಯ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
