ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪಿಕಪ್ ವಾಹನ ಸಹಿತ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನರಸಿಂಹರಾಜಪುರ ತಾಲೂಕು ಬಾಳೇಹೊನ್ನೂರು ಹೋಬಳಿ ದಾವಣ ಗ್ರಾಮದ ಸರ್ವೆ ನಂ. 38ರ ಮೇಗರಮಕ್ಕಿಯಲ್ಲಿ ಈ ಘಟನೆ ನಡೆದಿದೆ.
ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಮಹೀಂದ್ರ ಬೊಲೆರೋ ಪಿಕಪ್ ವಾಹನವನ್ನು ಬೆಲೆ ಬಾಳುವ ಸ್ವತ್ತು ಸಮೇತ ಹಿಡಿದು, ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದ ಒಟ್ಟು ಎಂಟು ಜನ ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ಪತ್ತೆ ಹಚ್ಚಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನ , ವಲಯ ಅರಣ್ಯಾಧಿಕಾರಿಗಳಾದ ಆದರ್ಶ್ ಎಂ. ಪಿ. ಅವರ ನೇತೃತ್ವದಲ್ಲಿ ವಲಯದ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಲಭ್ಯ ಒದಗಿಸಿ: ಕರವೇ ಒತ್ತಾಯ
ದಾಳಿಯ ವೇಳೆ ಉಪವಲಯ ಅರಣ್ಯಾಧಿಕಾರಿಗಳಾದ ರಂಗನಾಥ ಆರ್ ಅತಾಲಟ್ಟಿ, ನಂದೀಶ ಹೆಚ್. ಬಿ. , ಮಂಜುನಾಥ ಅಗೇರ, ಮತ್ತು ಗಸ್ತು ಅರಣ್ಯ ಪಾಲಕರಾದ ಲೋಹಿತ್, ಪ್ರತಾಪ್,ನಾಗರಾಜ, ಅರಣ್ಯ ವೀಕ್ಷಕರಾದ ರವಿ,ಗಣೇಶ್, ಆದಿತ್ಯ, ವಾಹನ ಚಾಲಕರಾದ ನಾಗರಾಜ ಇನ್ನಿತರರು ಇದ್ದರು.
