ಗುಡ್ಡ ಕುಸಿತದಿಂದಾಗಿ ನಿರ್ಬಂಧಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಅಧಿಕಾರಿಗಳು ಸುಗಮಗೊಳಿಸಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮರ್ ಸಮೀಪದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಸುಂಕದ ಮಕ್ಕಿ, ನೆಮ್ಮಾರ್ ಸಮೀಪ ವಿಪರೀತ ಮಳೆಯಿಂದಾಗಿ ಹೆದ್ದಾರಿ ರಸ್ತೆಯ ಮೇಲೆ ಭೂಕುಸಿತದಿಂದಾಗಿ ಗುಡ್ಡದ ಮಣ್ಣು ಬಿದ್ದಿದ್ದು, ಶೃಂಗೇರಿಯಿಂದ ಎಸ್ ಕೆ ಬಾರ್ಡರ್ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಶ್ರೀ ಬಾಲಾಜಿ ಸಿಂಗ್ ಡಿವೈಎಸ್ಪಿ ಕೊಪ್ಪ ಉಪ ವಿಭಾಗ ಹಾಗೂ ಪಿಎಸ್ಐ ಶೃಂಗೇರಿ ಠಾಣೆ ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಿಬ್ಬಂದಿಯವರನ್ನು ನಿಯೋಜಿಸಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಿ ಬಿದರಗೋಡು ಆಗುಂಬೆ ಮಾರ್ಗವಾಗಿ ಡೈವರ್ಶನ್ ನೀಡಿ ವಾಹನ ಸಂಚಾರಕ್ಕಾಗಿ ಬದಲಿ ರಸ್ತೆ ಮಾರ್ಗವನ್ನು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಎರಡು ಕಾರುಗಳ ಅಪಘಾತ: ಪ್ರಣಾಪಾಯದಿಂದ ಪ್ರಯಾಣಿಕರು ಪಾರು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅಗ್ನಿಶಾಮಕ ತುರ್ತು ಸೇವೆ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿ ನೀಡಿದ್ದು, ರಸ್ತೆಯ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಿ ಭಾನುವಾರ ಬೆಳಗ್ಗೆ 9 ಗಂಟೆಗೆ ಶೃಂಗೇರಿ ಎಸ್ ಕೆ ಬಾರ್ಡರ್ ರಸ್ತೆಯನ್ನು ವಾಹನಗಳ ರಸ್ತೆ ಸಂಚಾರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.