ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ಮೌಲ್ಯದ 6 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಯಶವಂತಪುರಕ್ಕೆ ಕಡೂರು ಮಾರ್ಗವಾಗಿ ತೆರಳುತ್ತಿದ್ದ, ವಾಸ್ಕೋಡಿಗಾಮ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ಮೌಲ್ಯದ 6 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಾಹನ ಅಪಘಾತ: ಓರ್ವ ಸಾವು
ಈ ಕುರಿತು ನಿರೀಕ್ಷಕ ಎಲ್ ಸಿ ಸಂದೀಪ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಮದ್ಯವನ್ನು ವಶಪಡಿಸಿಕೊಂಡಿದ್ದು, ಸಿಬ್ಬಂದಿಗಳಾದ ನಾಗೇಂದ್ರ, ಮಂಜುಳಾ, ಉಮೇಶ್, ಈರಪ್ಪ, ಅಶೋಕ್ ಹಾಗೂ ಇನ್ನಿತರರು ಕಾರ್ಯಚರಣೆಯಲ್ಲಿದ್ದರು.