ಸಮಾಜಗಳ ಅಭಿವೃದ್ಧಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದಿಂದ ಮಾತ್ರ ಎಲ್ಲರೊಡನೆ ಬದುಕಲು ಸಾಧ್ಯವೆಂದು ಸೂಫಿ ಸಂತರ ಸಂದೇಶ ಸೌಹಾರ್ದ ಬದುಕಿಗೆ ಮಾರ್ಗದರ್ಶಕರಾಗಿದ್ದಾರೆ. ಆದರೇ, ಮುಸ್ಲಿಂ ಸಮುದಾಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಅದೇ ಸಮುದಾಯದ ಜನರು ಜಾಮೀಯ ಮಸೀದಿ ಬಳಿ ವಾದ ವಿವಾದ ಮಾಡಿಕೊಂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಒಂದೇ ಸಮುದಾಯದಲ್ಲಿ ವಿವಾದವಾಗಲು ಕಾರಣವೇನು?ಸುಮಾರು 16-20 ವರ್ಷಗಳಿಂದ ಜಾಮೀಯ ಮಸೀದಿಯಲ್ಲಿ ಮಸೂದ್ ಅಹಮದ್ ಅವರು ಅಧ್ಯಕ್ಷರಾಗಿದ್ದರು. ಮಸೀದಿಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳಿಗೆ ಬಂದಂತಹ ಹಣವನ್ನು ಬಳಸುತ್ತಿದ್ದರು. ಈ ಕುರಿತು ಮಸೀದಿಯ ಸದಸ್ಯರು ಹಾಗೂ ಮುಖಂಡರು ಸೇರಿ ಇಷ್ಟೂ ವರ್ಷದಲ್ಲಿ ಹಣ ಯಾವುದಕ್ಕೆ ಬಳಕೆಯಾಗಿದೆ ಹಾಗೆಯೇ, ಇನ್ನ ಉಳಿದ ಹಣ ಯಾವ ಅಭಿವೃದ್ಫಿ ಕೆಲಸಕ್ಕೆ ಬಳಸುತ್ತಿದ್ದಾರೆಂದು ಮಾಹಿತಿ ಪಡೆಯಲು ಸೌಹಾರ್ದತೆಯಿಂದ ವಿಚಾರಿಸಲು ಹೋಗುವ ವೇಳೆ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಸಗೀರ್ ಅವರನ್ನು ಕೂಡ ಸದಸ್ಯರು ಕರೆದುಕೊಂಡು ಮಸೀದಿಯ ಬಳಿ ಹೋಗಿ ವಿಚಾರಿಸುತ್ತಿದ್ದ ವೇಳೆ ಮಸೀದಿಯ ಅಧ್ಯಕ್ಷರ ಕಡೆಯಿಂದ ಗುಂಪೂಂದು ಹಲ್ಲೆ ಮಾಡಿ ನಿಂದಿಸಿದರು ಎಂದು ಹಲ್ಲೆಗೊಳಗಾದ ಮಸೀದಿಯ ಸದಸ್ಯರು ಹಾಗೂ ಮುಖಂಡರು ಈದಿನ.ಕಾಮ್ ಜೊತೆ ಮಾತಾಡಿದರು.

ದೂರು ದಾಖಲಿಸಲು ಹೋದಾಗ: ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದಾಗ ಅಧಿಕಾರಿಗಳು ನಮ್ಮನ್ನು ಗದರಿಸಿ ಅಲ್ಲೇ ಕೂರಿಸಿ ಪ್ರತಿ ದೂರನ್ನು ದಾಖಲಿಸಿ, ನಮ್ಮ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಿ ಅಧಿಕಾರಿಗಳ ನೇತೃತ್ವತದಲ್ಲಿ ನಮ್ಮನ್ನು 307 ಸೆಕ್ಷನ್ ಹಾಕಿಸಿ 18 ದಿನಗಳ ಕಾಲ ಬಂಧಿಸಿಟ್ಟಿದ್ದರು. ಕುಟುಂಬದವರು ಹಾಗೂ ಹಲವು ಸಂಘಟನೆ ಮುಖಂಡರು ಭೇಟಿಗೂ ಅವಕಾಶ ಕೊಡದೆ. ಸರಿಯಾಗಿ ಊಟವನ್ನು ಸಹ ಕೊಡುತ್ತಿರಲಿಲ್ಲ ಎಂದು ಮಸೀದಿಯ ಸದಸ್ಯ ಹಾಗೂ ಬಂಧನದಲಿದ್ದ ಅಬ್ದುಲ್ ಸಮೀರ್ ಈದಿನ. ಕಾಮ್ ಜೊತೆ ಮಾತಾಡಿದ್ದಾರೆ.

ಪ್ರತಿ ದೂರುದಾರರ ಆರೋಪ: ಮಸೀದಿಯಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೆ, ಅನ್ಯ ಗುಂಪೊಂದು ಜಗಳ ಮಾಡಿ, ಚಾಕುವಿನಿಂದ ಹಲ್ಲೆಗೈದು, ದೊಣ್ಣೆಯಿಂದ ಹೊಡೆದು, ಕೊಲೆ ಮಾಡಲು ಯತ್ನಿಸಿದ್ದಾರೆಂದು ಪ್ರತಿ ದೂರುದಾರ ಮಸೂದ್ ಅಹಮದ್ ಕೇಸ್ ದಾಖಲೆ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಗೀರ್ ಸಾವಿಗೆ ನ್ಯಾಯ ದೊರಕಿಸಿ ಕೊಡಿ: ನ್ಯಾಯ ಕೇಳಲು ಹೋಗಿದಕ್ಕೆ ನನ್ನ ಗಂಡನನ್ನು 18 ದಿನ ಬಂಧನದಲ್ಲಿಟ್ಟಿದರು. “ಎಷ್ಟೋತ್ತಿಗಾದಾರು ಯಾರಿಗೆ ಏನೇ ಸಮಸ್ಯೆ ಹಾಗೂ ಅನಾರೋಗ್ಯದಿಂದ ಪೀಡಿತರಾದವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನ ಗಂಡ ಯಾರಿಗೂ ಬೈದವರಲ್ಲ, ಬೆಳಗ್ಗೆನೇ ಮನೆ ಮುಂದೆ ಹಳ್ಳಿಕಡೆಯಿಂದ ಜನರು ವಯಸ್ಸಾದ ವೃದ್ಧರು ಕೇಳಿಕೊಂಡು ಬರುತ್ತಿದ್ದರು”. ಈಗ ನಮ್ಮನ್ನು ಅಗಲಿದ್ದಾರೆ. ಅವರು 18 ದಿನ ಜೈಲಿನಲ್ಲಿದ್ದಾಗ ನಾವು ಭೇಟಿ ಮಾಡಿ ಮಾತಾಡುವಾಗ “ನನ್ನದೇನು ತಪ್ಪಿಲ್ಲ ನಾನು ಇಲ್ಲಿಯವರೆಗೂ ಸಂಪಾದಿಸಿದ ಗೌರವ ಎಲ್ಲಾ ಮಣ್ಣು ಪಲಾಯಿತು ಏನು ಮಾಡದೇ ಜೈಲಿಗೆ ಬರುವಂತಾಯಿತು”ಎಂದು ಮಾನಸಿಕವಾಗಿ ನೊಂದು ಜೈಲಿನಿಂದ ಬಂದು ಮರು ದಿನವೇ ಅದೇ ಚಿಂತೆಯಿಂದ ಪ್ರಾಣ ಕಳೆದುಕೊಳ್ಳುವಂತ್ತಾಯಿತು”. ನನಗೆ ಐದು ಜನ ಮಕ್ಕಳು ನಮ್ಮನ್ನು ಬಿಟ್ಟು ಅಗಲಿದ್ದಾರೆ. “ನನ್ನ ಗಂಡನನ್ನು ಮತ್ತೆ ಕೊಡಲು ಸಾಧ್ಯವಿಲ್ಲ, ನನ್ನ ಗಂಡನಿಗಾದ ಅನ್ಯಾಯಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸಿ ಎಂದು ಸಿಮಾ ಈದಿನ.ಕಾಮ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಕಳೆದ ಭಾನುವಾರ ದಲಿತ, ಅಲ್ಪ ಸಂಖ್ಯಾತ, ರೈತ, ಹಾಗೂ ಇನ್ನೂ ಸಂಘಟನೆಯ ಮುಖಂಡರು ಸೇರಿ ಅಬ್ದುಲ್ ಸಗೀರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಅಜ್ಜಂಪುರ ತಾಲೂಕಿನ ಕನಕ ಮಂಟಪದಲ್ಲಿ ಮಾಡಿದರು. ಈ ಕಾರ್ಯಕ್ರಮಕ್ಕೆ ನೆರದಿದ್ದ ಜನರು, ಸಂಘಟನೆಯ ಮುಖಂಡರೆಲ್ಲರೂ ಅಬ್ದುಲ್ ಸಗೀರ್ ಏನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ನಮ್ಮನ್ನು ಅಗಲಿದ್ದಾರೆ, ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಪ್ರತಿಯೊಬ್ಬರು ಪ್ರತಿಕ್ರಿಯಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ಸೆರೆ ಕಾರ್ಯಾಚರಣೆ: ಒಂದು ಪುಂಡಾನೆ ಸೆರೆ
ಈ ಕುರಿತು ಅಜ್ಜಂಪುರ ವ್ಯಾಪ್ತಿಯ ಹಲವು ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರು “ತಪ್ಪು ಮಾಡದೇ ಸುಳ್ಳು ಮಾಹಿತಿ ಆದರದಲ್ಲಿ ಶಿಕ್ಷೆ ಅನುಭವಿಸಿದ ಅಬ್ದುಲ್ ಸಗೀರ್ ಅವರ ಸಾವಿಗೆ ಹಾಗೂ ಸುಳ್ಳು ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಿದ್ದ ಸ್ನೇಹಿತರಿಗೆ ನ್ಯಾಯ ದೊರಕಬೇಕು” ಎಂದು ಈ ದಿನ.ಕಾಮ್ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.