ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಂಯುಕ್ತ ಆಶ್ರಯದಲ್ಲಿ ತರೀಕೆರೆ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ನಡೆಸಲಾಯಿತು.
ಕನಕದಾಸರು, ಮಡಿವಾಳ ಮಾಚಿದೇವ, ಬಸವಣ್ಣನವರು ವಾಲ್ಮೀಕಿಯವರು ಸಮಾಜದ ಸುಧಾರಕರಾಗಿದ್ದಾರೆ. ಅವರು ಯಾವುದೇ ಜಾತಿಗೆ ಸೀಮಿತರಾಗಿಲ್ಲ ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ. ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣದ ಗುರಿ ಹೊಂದಿದ್ದರು ಎಂದು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಕವಾಲಿ ಅವರು ತಿಳಿಸಿದರು.
ಕನಕದಾಸರು ಭಕ್ತಿಯ ಮಾರ್ಗದಲ್ಲಿ ಸಮಾಜ ಸುಧಾರಣೆಗೆ ತೊಡಗಿದರು. ಮಡಿವಂತಿಕೆ ಮನಸ್ಸಿನಲ್ಲಿರಬೇಕು. ಶಿಕ್ಷಣ ಮತ್ತು ಆಧ್ಯಾತ್ಮಿಕ ಜ್ಞಾನದ ಅರಿವಿನ ಬಗ್ಗೆ ಮಹತ್ವ ನೀಡಿದ್ದಾರೆ. ಅವರ ಕೀರ್ತನೆಗಳು, ಆದರ್ಶಗಳು ಸಮಾಜದ ಬದಲಾವಣೆಯನ್ನು ಬಯಸಿದೆ ಎಂದು ಉಪ ವಿಭಾಗ ಅಧಿಕಾರಿ ಡಾ. ಕೆ ಜೆ ಕಾಂತರಾಜ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರುಬ ಸಂಘ 1944 ರಿಂದ ಸಂಘಟಿತವಾಗಿದೆ. ದಿವಂಗತ ನಾಗಪ್ಪ, ಪರಮೇಶ್ವರಪ್ಪ, ಟಿ.ಹೆಚ್ ಶಿವಶಂಕರಪ್ಪ, ಹಾಗೂ ಎರಡು ಬಾರಿ ಜಿಎಚ್ ಶ್ರೀನಿವಾಸ್ ಅವರು ಶಾಸಕರಾಗಿದ್ದಾರೆ. ಹೀಗೆ ನಾಲ್ಕು ಜನರು ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಂಘವು ಸಮಾಜ ಸೇವೆಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದೆ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಟಿ ಎಸ್ ರಮೇಶ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಮೂಡಿಗೆರೆ l ಮೀನು ಹಿಡಿಯಲು ಹೋಗಿದ್ದ ಕೂಲಿ ಕಾರ್ಮಿಕ ಕೆರೆಗೆ ಬಿದ್ದು ಸಾವು
ಈ ವೇಳೆ ಪುರಸಭಾ ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್, ಎಂ ನರೇಂದ್ರ, ಡಾ. ಭರತ್ ಅಂಚೆ, ಲಕ್ಷ್ಮಿದೇವಮ್ಮ ಮಾತನಾಡಿದರು. ನವೀನ್ ಕುಮಾರ್ ಉಪನ್ಯಾಸ ನೀಡಿದರು.
ಇದೆ ಸಂದರ್ಭದಲ್ಲಿ ಡಾ. ಶಿವಶಂಕರ್, ಡಾ. ದ್ರಾಕ್ಷಿಯಾನಿ, ಎಂ ನರೇಂದ್ರ, ಲಕ್ಷ್ಮೀದೇವಮ್ಮ, ಭಾಗ್ಯಮ್ಮ, ಧನ್ಯಶ್ರೀ, ಟಿ ಜಿ ಮಂಜುನಾಥ್, ಆರ್ ದೇವಾನಂದ, ಟಿ ವಿ ಶಿವಶಂಕರಪ್ಪ, ವೇದಿಕೆಯಲ್ಲಿ ಪೊಲೀಸ್ ಅಧಿಕಾರಿ ಹಾಲುಮೂರ್ತಿರಾವ್, ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಪೊಲೀಸ್ ನಿರೀಕ್ಷಿಕರಾದ ರಾಮಚಂದ್ರನಯ್ಕ್, ಪುರಸಭೆ ಮುಖ್ಯಧಿಕಾರಿ ಎಚ್ ಪ್ರಶಾಂತ್, ಗಂಗಾಧರ್, ಇ ಓ. ಡಾ. ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪುರಸಭಾ ಸದಸ್ಯರಾದ ಟಿಜಿ ಶಶಾಂಕ್, ಚೇತನ್, ಗೀತಾ ಗಿರಿರಾಜ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ, ದರ್ಶನ್ ಇನ್ನಿತರರು ಉಪಸ್ಥಿತರಿದ್ದರು.