ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು ಬಿದಿರೆ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಿಂದ ಮೃತ ಪಟ್ಟ ವ್ಯಕ್ತಿ ಕುಮಾರ (37), ಚಂದ್ರಪ್ಪ ಎಂಬುವರ ತೋಟಕ್ಕೆ ತೆರಳಿದ್ದಾಗ ಬಿದ್ದಿದ್ದ ತೆಂಗಿನಕಾಯಿ ತೆಗೆದುಕೊಂಡಿದ್ದಾರೆಂದು ಚಂದ್ರಪ್ಪ ಹಾಗೂ ಅವನ ಅಳಿಯ ಮಧು ಎಂಬುವರು ಹಲ್ಲೆ ನಡೆಸಿದ ಪರಿಣಾಮ, ಕುಮಾರ್ ಎಂಬಾತ ಗಂಭೀರ ಗಾಯಗೊಂಡಿದ್ದರು, ಸ್ಥಳೀಯರು ವ್ಯಕ್ತಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆ ಫಲಿಸದೇ ಹಲ್ಲೆಗೊಳಗಾದ ವ್ಯಕ್ತಿ ಬುಧವಾರ ಮೃತಪಟ್ಟಿದ್ದಾರೆ.
ಇದನ್ನ ಓದಿದ್ದೀರಾ?ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ
ಈ ಕುರಿತು ಮೊದಲೇ ದಾಖಲಿಸಿದ್ದ ಹಲ್ಲೆ ಪ್ರಕರಣಕ್ಕೆ ಬಿಎನ್‌ಎಸ್ ಕಲಂ ಪ್ರಕಾರ ಕೊಲೆ ಆರೋಪ ಸೇರಿಸಿ, ಪ್ರಕರಣವನ್ನು ಪರಿವರ್ತಿಸಲಾಗಿದೆ. ಹಾಗೆಯೇ, ಆರೋಪಿಗಳಾದ ಚಂದ್ರಪ್ಪ ಹಾಗೂ ಮಧು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.