ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ ಮಾಡಿದ ಪರಿಣಾಮ ಓಮಿನಿ ಕಾರ್ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದಿರುವ ಘಟನೆ, ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿಕ್ಕಮಗಳೂರಿನಿಂದ ಶೃಂಗೇರಿ ತಾಲೂಕಿಗೆ ಸಂಪರ್ಕವಿರುವ ಈ ರಸ್ತೆಯೂ ತಿರುವುಗಳಿಂದ ಕೂಡಿದ್ದು, ಅತೀ ವೇಗವಾಗಿ ಬಾಲಕ ಚಾಲನೆ ಮಾಡಿದ್ದರಿಂದ ಓಮಿನಿ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದಿದು, ದಿನನಿತ್ಯ ನೂರಾರು ಪ್ರವಾಸಿಗರ ವಾಹನಗಳು ಸಂಚಾರಿಸುತ್ತವೆ. ಇಂತಹ ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಿದೆ. ಈ ಘಟನೆ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
