ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದ ಒಳರೋಗಿಯೊಬ್ಬರು ಉಡುಪಿ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದರು, ಬಳಿಕ ಅಂಬಲಪಾಡಿ ಶೆಟ್ಟಿ ಲಂಚ್ ಹೋಂ ಬಳಿ ತೀವ್ರ ಅಸ್ವಸ್ಥಗೊಂಡಂತೆ ವ್ಯಕ್ತಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ಪೊಮ್ಮು(57), ಹೊಟ್ಟೆ ನೋವು, ಉಸಿರಾಟ ಸಮಸ್ಯೆ ಮತ್ತು ಕಾಲು ಊತಕ್ಕಾಗಿ ಮೇ 29ರಂದು ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ನಂತರ ಜೂ.2ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು.
ಅಂಬಲಪಾಡಿಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ಪೊಮ್ಮು ಅವರನ್ನು ಸಮಾಜ ಸೇವಕ ನಿತ್ಯಾನಂತ ಒಳಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಮದ್ಯ ಸಾಗಾಟ: ವಶ ಪಡಿಸಿಕೊಂಡ ಅಧಿಕಾರಿಗಳು
ಅನಾರೋಗ್ಯ ಪೀಡಿತರಾದ ಪೊಮ್ಮು ಎಂಬ ವ್ಯಕ್ತಿ, ಉಸಿರಾಟ ಸಮಸ್ಯೆ ಹೊಟ್ಟೆನೋವು ಉಲ್ಬಣಗೊಂಡು ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.