ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ, ಮುಸ್ಲಿಂ ಸಮುದಾಯದವರು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯದಿದ್ದಲ್ಲಿ, ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮುಸ್ಲಿಂ ಮುಖಂಡ ಸಿ.ಎನ್ ಅಕ್ಕಲ್ ಪ್ರತಿಭಟನೆಯಲ್ಲಿ ಮಾತಾಡಿದರು
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಜನರ ಮಧ್ಯೆ ದ್ವೇಷ ಭಾಷಣ ಮಾಡುವ ಮೂಲಕ ಬೆಂಕಿ ಹಚ್ಚುವ ಬದಲು ಸೌಹಾರ್ದತೆ ಬೆಳೆಸಿದರೆ ಸಮಾಜದಲ್ಲಿ ಎಲ್ಲವೂ ಕೂಡ ಸುಧಾರಣೆ ಆಗುತ್ತದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಆನೆ ದಾಳಿ; ಯುವಕ ಪ್ರಾಣಾಪಾಯದಿಂದ ಪಾರು
ಈ ವೇಳೆ ಮುಸ್ಲಿಂ ಮುಖಂಡರು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು
