ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಅದೇಶಿಸಿದೆ.
ಪೋಕ್ಸೋ ಪ್ರಕರಣದ ಆರೋಪಿಗಳಾದ ಕಿರಣ್ ನಾಯಕ ಬಿನ್ ರಂಗಸ್ವಾಮಿ ನಾಯ್ಕ (21), ಮತ್ತೊಬ್ಬ ಆರೋಪಿ ಅಭಿಷೇಕ್ ನಾಯ್ಕ ಬಿನ್ ಧನಪಾಲ್ ನಾಯಕ (23), ಇಬ್ಬರು ಕಡೂರು ತಾಲೂಕು, ಚಿಕ್ಕಂಗಳ ಗ್ರಾಮದವರಾಗಿದ್ದಾರೆ. 23.11.2023 ರಂದು ಅಪ್ರಾಪ್ತ ಬಾಲಕಿಯನ್ನು ಕಡೂರಿ ತಾಲೂಕಿನ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಹಾಕಿರುವುದಾಗಿ ಬಾಲಕಿ ನೀಡಿರುವ ದೂರಿನಲ್ಲಿ ಉಲ್ಲೆಖಿಸಲಾಗಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 312/23. ಕಲಂ 363, 366(a), 376(2)(n), 342, 506, 114 ಐಪಿಸಿ ಹಾಗೂ 6, 8,12,17,18 ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗಿತ್ತು.
ಕಡೂರು ವೃತ್ತ ನಿರೀಕ್ಷಕರಾಗಿದ್ದ ಕೆ ಆರ್ ಶಿವಕುಮಾರ್ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡಿದ್ದು, ಕಡೂರಿನ ಪ್ರಭಾರೆ ವೃತ್ತ ನಿರೀಕ್ಷಕರಾಗಿದ್ದ ಶ್ರೀಕಾಂತ್ ವೃತ್ತ ನಿರೀಕ್ಷಕರು ಬೀರೂರು ವೃತ್ತ, ಆರೋಪಿತರ ವಿರುದ್ಧ ಚಿಕ್ಕಮಗಳೂರಿನ ಘನ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ವಿಶೇಷ ಸರ್ಕಾರಿ ಅಭಿಯೋಜಕರಾದ ಭರತ್ ಕುಮಾರ್ ವಾದ ಮಂಡಿಸಿದ್ದು, ಘನ ನ್ಯಾಯಾಲಯವು ಆರೋಪಿಗಳಿಗೆ ಕಲಂ 363, 366, 342, 506 ಐಪಿಸಿ & 8, 12, ಪೋಕ್ಸೋ ಕಾಯ್ದೆ ಅಡಿಯಲ್ಲಿ ಒಂದನೇ ಆರೋಪಿಗೆ ಹತ್ತು ವರ್ಷ ಕಾರಾಗೃಹ 41,000 ದಂಡ ಎರಡನೇ ಆರೋಪಿಗೆ ಹತ್ತು ವರ್ಷ ಶಿಕ್ಷೆ 11,000 ದಂಡ ವಿಧಿಸಿರುತ್ತೆ. ಹಾಗೂ ನೊಂದ ಬಾಲಕಿಗೆ ಒಂದು ಲಕ್ಷ ರೂ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಶೋ ರೂಮ್ ಸಿಬ್ಬಂದಿಯಿಂದಲೇ ಡೀಸೆಲ್ ಕಳ್ಳತನ
ಈ ಕುರಿತು ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಹಾಗೂ ಸರ್ಕಾರಿ ಅಭಿಯೋಜಕರಿಗೆ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆಯವರು ಅಭಿನಂಧಿಸಿದ್ದಾರೆ.

https://shorturl.fm/kT2ZT