ಆಹಾರ ಭದ್ರತೆ ಯೋಜನೆಯಡಿ ಕೇಂದ್ರ ಸರ್ಕಾರ 5 ಕೆ.ಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯನ್ನು ಅಂಗಡಿ ಮಾಲೀಕರಿಗೆ ಪ್ರತಿ ತಿಂಗಳು 15ರಂದು ವಿತರಿಸುವುದು ವಿಳಂಬವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ಮಂಗಳವಾರ ನಡೆಸಲಾಯಿತು.
ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಈಚೀಟಿದಾರರಿಗೆ ಪ್ರತಿ ತಿಂಗಳು 20ನೇ ತಾರೀಖಿನ ನಂತರ ಪಡಿತರ ವಿತರಣೆ ಮಾಡಲಾಗುತ್ತಿರುವುದರಿಂದ ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ದರಿಂದ ತಕ್ಷಣ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆಯನ್ನು ವಿಳಂಬವಿಲ್ಲದೆ ನೀಡಬೇಕು ಎಂದು ಕರಾಸಪವಿಸ ಮುಖಂಡ ಟಿ ಕೃಷ್ಣಪ್ಪ ತಿಳಿಸಿದರು.
ಮಾಲೀಕರಿಗೆ ಬರಬೇಕಾದ ಕಮೀಷನ್ ಹಣವನ್ನು ಪ್ರತೀ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು ಮತ್ತು ಸುಮಾರು 7 ವರ್ಷಗಳಿಂದ ಇ.ಕೆ.ವೈ.ಸಿ. ಮಾಡಿರುವ ಹಣ ಪಾವತಿಸಿಲ್ಲ, ಈ ಕೂಡಲೇ ಇ.ಕೆ.ವೈ.ಸಿ. ಹಣವನ್ನು ಬಿಡುಗಡೆ ಮಾಡಬೇಕು. ಹಾಗೆಯೇ, ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ 24 ಗಂಟೆಗಳ ನಂತರ ಬಿಲ್ ಆಪ್‌ಡೇಟ್ ಆಗುತ್ತದೆ. ಇಂತಹ ತಾಂತ್ರಿಕ ಸಮಸ್ಯೆಗಳು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆ ಅವಕಾಶ ಮಾಡಿಕೊಡಬೇಕು ಎಂದು ಕರಾಸಪವಿಸ ಮುಖಂಡ ಟಿ ಕೃಷ್ಣಪ್ಪ ತಿಳಿಸಿದರು.
ಮಾರ್ಚ್ – ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ 5 ಕೆ.ಜಿ ಕಮೀಷನ್ ಹಣ ಬಿಡುಗಡೆ ಮಾಡಿದ್ದಾರೆ. ಎನ್.ಎಫ್.ಎಸ್.ಐ. ಕಮೀಷನ್ ಹಣವನ್ನು ಏಪ್ರಿಲ್ ತಿಂಗಳು ಒಂದು ತಿಂಗಳು ಮಾತ್ರ ಬಿಡುಗಡೆಯಾಗಿದ್ದು ಮೇ-ಜೂನ್-ಜುಲೈ ಕಮೀಷನ್ ಹಣ ಬಿಡುಗಡೆಯಾಗಿಲ್ಲ, ತಕ್ಷಣ ಬಿಡುಗಡೆಗೊಳಿಸಬೇಕೆಂದು ಕರಾಸಪವಿಸ ವತಿಯಿಂದ ಒತ್ತಾಯಿಸಿದರು. ಈ ವೇಳೆ ಚನ್ನಕೇಶವಗೌಡ, ಡಿ ತಾಯಣ್ಣ ಹಾಗೂ ಕರಾಸಪವಿಸ ಸಂಘದವರು ಭಾಗವಹಿಸಿದರು.
