ಚಿಕ್ಕಮಗಳೂರು ತಾಲೂಕಿನ ಕೊಂಬುಗತ್ತಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಂಬುಗತ್ತಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 1.26 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಕುರಿತು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ಒಳಮೀಸಲಾತಿ ಜಾರಿಗೆ ಅಖಿಲ ಭಾರತ ಬಹುಜನ ಸಮಾಜ ಪಕ್ಷ ಆಗ್ರಹ
ಈ ಕಾರ್ಯಾಚರಣೆಯಲ್ಲಿ ಪಿಐಸ್ಐ ರಘುನಾಥ ಎಸ್ ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಖಾನ್, ಹರೀಶ ಟಿ ಕೆ, ಧರ್ಮರಾಜ, ಹರಿಪ್ರಸಾದ್, ರಮೇಶ ಎನ್ ಆರ್ ಮತ್ತು ಮಹದೇವಸ್ವಾಮಿ ಇದ್ದರು.
