ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ಸಹ್ಯಾದ್ರಿಪುರ ನಿವಾಸಿ ನಂದಿತ (13), ಲಿಂಗದಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯಲ್ಲಿ ಸಮವಸ್ತ್ರ ಕೊಟ್ಟಿಲ್ಲ. ಸಮವಸ್ತ್ರ ಹಾಕಿಕೊಳ್ಳದೆ ಶಾಲೆಗೆ ಹೋದರೆ ಶಿಕ್ಷಕರು ಪ್ರಶ್ನೆ ಮಾಡುತ್ತಾರೆ ಎಂದು ಮನೆಯಲ್ಲಿ ಹೇಳಿದ್ದಳು ಎಂದು ತಿಳಿದು ಬಂದಿದೆ.
ಪೋಷಕರು ಸದ್ಯಕ್ಕೆ ಪಕ್ಕದ ಮನೆ ವಿದ್ಯಾರ್ಥಿನಿಯ ಹಳೆಯ ಸಮವಸ್ತ್ರ ಹೊಂದಿಸಿ ಕೊಟ್ಟಿದ್ದರು. ಹೊಸ ಬಟ್ಟೆಯನ್ನು ಹೊಲಿಗೆಗೆ ಕೊಟ್ಟಿದ್ದರಿಂದ ಎರಡು ದಿನ ತಡವಾಗುತ್ತದೆ ಎಂದು ಪೋಷಕರು ತಿಳಿಸಿದ್ದರು ಕೂಡ ಮನ ನೊಂದು ಸೋಮವಾರ ಬೆಳಗ್ಗೆ ವಿಷ ತೆಗೆದುಕೊಂಡಿದ್ದೇನೆ ಎಂದು ವಿದ್ಯಾರ್ಥಿನಿ ತನ್ನ ತಾಯಿಯ ಬಳಿ ಹೇಳಿದ್ದಾಳೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವರುಣನ ಆರ್ಭಟ: ಐದು ತಾಲೂಕಿನ ಶಿಶುಪಾಲನ ಕೇಂದ್ರ, ಅಂಗನವಾಡಿಗೆ ರಜೆ ಘೋಷಣೆ
ಈ ಕುರಿತು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.