ಚಿಕ್ಕಮಗಳೂರು ನಗರದ ಕೋಟೆಯ ವಾರ್ಡ್ ನಂಬರ್ 6, ಅಗ್ರಹಾರ ಸರ್ಕಲ್ ಬಳಿ ಒಳಚರಂಡಿ ಸಂಪೂರ್ಣ ತುಂಬಿದೆ ಎಂದು ತಿಳಿಸಿದರು, ನಿರ್ಲಕ್ಷ್ಯವಹಿಸುತ್ತಿರುವ ನಗರಸಭೆ ಅಧಿಕಾರಿಗಳು.
ಎರಡು ದಿನಗಳಲ್ಲಿ ಮಳೆ ಬಂದ ಕಾರಣ ಸುತ್ತಲಿನ ಮನೆಗಳಿಗೆ ಶೌಚಾಲಯದ ನೀರು ತುಂಬಿ ದುರ್ವಾಸನೆ ಬರುತ್ತಿದೆ. ಇದೇ ರೀತಿ ಒಂದೊಮ್ಮೆ ಸಮಸ್ಯೆ ಆಗಿದೆ ಎಂದು ನಗರಸಭೆಗೆ 6 ತಿಂಗಳ ಹಿಂದೆಯೇ, ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ ಎಂದು ಸೋಮಶೇಖರ್ ಹಳ್ಳಿಕಾರ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅರಣ್ಯ ಪ್ರದೇಶಕ್ಕೆ ಬೆಂಕಿ: ನಾಲ್ವರನ್ನು ಬಂಧಿಸಿದ ಅಧಿಕಾರಿಗಳು
ಈ ಸಮಸ್ಯೆ ಕುರಿತು ಶಾಶ್ವತ ಪರಿಹಾರವನ್ನು ಮಾಡಿಕೊಡಬೇಕು, ಎಂದು ಮತ್ತೊಮ್ಮೆ ಆಯುಕ್ತರಿಗೆ ಸೋಮವಾರ ಮನವಿ ಮಾಡಲಾಗಿದೆ ಎಂದು ಸೋಮಶೇಖರ್ ಹಳ್ಳಿಕಾರ್ ತಿಳಿಸಿದರು. ಈ ವೇಳೆ ಮೆಡಿಕಲ್ ನಾಗಣ್ಣ, ಕೋಟೆ ಸೋಮಣ್ಣ, ಮಾಜಿ ನಗರಸಭಾ ಉಪಾಧ್ಯಕ್ಷರಾದ ಭಜೇಂದ್ರ ರಾಜ್ ಅರಸ್, ಸಿ ಹೆಚ್. ಶ್ರೀನಿವಾಸ್, ಕೇಶವೇ ಗೌಡ್ರು ಇನ್ನಿತರರಿದ್ದರು.
