ವಾಹನದ ಬಾಡಿಗೆ ಹಣ ಕೇಳುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೊಟ್ಟಿಗೆಹಾರದ ಅಜಾದ್ ನಗರದಲ್ಲಿ ಮಂಗಳವಾರದಂದು ಬೆಳಕಿಗೆ ಬಂದಿದೆ.
ರಾಮನಗರ ಮೂಲದ ಅಬ್ಬಾಸ್ ಎಂಬ ಆರೋಪಿ ವಾಹನದ ಬಾಡಿಗೆ ಕೇಳಲು ಮಹಿಳೆಯ ಮನೆಗೆ ಹೋಗಿದ ಸಮಯದಲ್ಲಿ, ಮಹಿಳೆ ಹಣ ಇಲ್ಲ ಎಂದಾಗ ಆರೋಪಿ ಅಬ್ಬಾಸ್ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿ, ಮಗಳಿಗೂ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಸ್ಫೋಟಕ ಪತ್ತೆ: ಆರೋಪಿ ಬಂಧನ
ಈ ಕುರಿತು ಬಣಕಲ್ ಠಾಣೆಯಲ್ಲಿ, ಐಪಿಸಿ ಕಲಂ 329(4), 74, 75, 115(2), 352, 351(2)(3) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ 3(1)(w), 3(2)(va) ಎಫ್‌ಐಆರ್ ದಾಖಲಿಸಿ ಆರೋಪಿ ಅಬ್ಬಾಸ್ ಎಂಬ ವ್ಯಕ್ತಿಯನ್ನು ಬಂಧಿಸಿಲಾಗಿದೆ.