ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಬಳಿ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದೆ.
ರಾಮನಗರದ ಮಾಗಡಿಯ ಪೂರ್ಣಿಮಾ (30) ಹಾಗೂ ಭದ್ರಾವತಿ ಮೂಲದ ಯುವಕ ಮಧು(29), ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಮಧು ವಾಹನ ಚಾಲಕ ವೃತ್ತಿ ಮಾಡುತ್ತಿದ್ದು, ಮಾಗಡಿಯಲ್ಲಿ ನೆಲೆಸಿದ್ದ. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಬೆಂಗಳೂರು KA 03 AD4628 ನೋಂದಣಿಯ ಯೆಲ್ಲೋ ಬೋರ್ಡ್ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದಾರೆ ಎನ್ನಲಾಗಿದ್ದು, ಯುವತಿಯ ಮೃತದೇಹ ಕಾರಿನೊಳಗೆ ಕತ್ತು ಹಿಸುಕಿದ ರೀತಿಯಲ್ಲಿ ಪತ್ತೆಯಾದರೆ, ಅಲ್ಲೇ ಪಕ್ಕದ ಮರದಲ್ಲಿ ಯುವಕನ ಶವ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು: ಪ್ರೀತಿಸಿದವನ ಜೊತೆ ಮಗಳ ಮದುವೆ ಮಾಡಿಸಿದ್ದಕ್ಕೆ ತಂದೆ-ತಾಯಿಯನ್ನು ಬಹಿಷ್ಕರಿಸಿದ ಸಂಬಂಧಿಕರು?
ಯುವತಿಯನ್ನು ಕೊಲೆ ಮಾಡಿ ಆತನೂ ನೇಣು ಹಾಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
