ಅರಣ್ಯ ಒತ್ತುವರಿ ಕಾಯ್ದೆ, ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ವಿಷಯವಾಗಿ ಮಹಿಳೆಯರು ಹೆಚ್ಚು ಕಾನೂನು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನಲ್ಲಿ ಅದೆಷ್ಟೋ ಸಮಸ್ಯೆಗಳು ಸರಮಲೆಯಾಗೆ ಉಳಿದಿವೆ. ಇತ್ತೀಚಿಗೆ ಮಲೆನಾಡಿನಲ್ಲಿ ಒತ್ತುವರಿ ತೆರವು, ಕಸ್ತೂರಿ ರಂಗನ್, ಮಾಧವ ಗಾಡ್ಗೀಳ್ ವರದಿಯಂತಹ ಅನೇಕ ಸಮಸ್ಯೆಗಳು ಮಾರ್ಪಾಡಾಗುತ್ತಿವೆ.
ಇಲ್ಲಿ ಬದುಕುತ್ತಿರುವ ಜನರು ದಿನಕ್ಕೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಈವರೆಗೆ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಸಿಕ್ಕಿಲ್ಲ.
ಸಮಸ್ಯೆಗಳನ್ನು ಪ್ರಶ್ನಿಸಿದರೆ ಯಾವುದೇ ತಪ್ಪು ಮಾಡದೇ ಇದ್ದರೂ ಅವರ ವಿರುದ್ಧ ಕೇಸ್ ದಾಖಲಿಸುತ್ತಾರೆ. ಯಾವ ಸೆಕ್ಷನ್‌ಗೆ ಏನೆಲ್ಲಾ ಹಕ್ಕು ಹಾಗೂ ಮಾಹಿತಿಗಳಿವೆಯೆಂದು ಈವರೆಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.

ಕಳೆದ ವಾರ ಅರಣ್ಯ ಕಾಯ್ದೆಗಳು ಮತ್ತು ಮಹಿಳಾ ಹಕ್ಕುಗಳ ಕುರಿತು ಒಂದು ‘ಕಾನೂನು ಅರಿವುʼ ಕಾರ್ಯಕ್ರಮ
ಮಾಡಬೇಕೆಂದು ಸುತ್ತಮುತ್ತಲಿನ ಜನರು ಯೋಚಿಸಿ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗಲಗಂಡಿ ಗ್ರಾಮ ಪಂಚಾಯತಿ ಒಳಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಲೆನಾಡು ಉಳಿಸಿ ಅಭಿಯಾನದವರು ಕಾರ್ಯಕ್ರಮ ಕೈಗೊಂಡಿದ್ದರು.
ಕಾನೂನು ಅರಿವು ಮೂಡಿಸುವುದಕ್ಕೆ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಿ ಹನುಮಂತಪ್ಪನವರು ಕಾರ್ಯಕ್ರಮಕ್ಕೆ ಬರುತ್ತೇನೆಂದು ಹೇಳಿದ್ದರು. ಹಾಗಾಗಿ ಸುತ್ತಮುತ್ತಲಿನ ಗ್ರಾಮದ ಜನರು ಕೂಲಿ ನಾಲಿ ಬಿಟ್ಟು ಕಾನೂನು ಅರಿವು ತಿಳಿಯಬೇಕೆಂದು ದೂರದ ಊರುಗಳಿಂದ ಕಾರ್ಯಕ್ರಮ ಏರ್ಪಡಿಸಿರುವ ಜಾಗಕ್ಕೆ ಬಂದಿದ್ದರು. ಆದರೆ ಅಧಿಕಾರಿಗಳ ವರ್ಗದಿಂದ ಕಾರ್ಯಕ್ರಮ ರದ್ದಾಗಿದೆ. ರದ್ದಾಗುವುದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ.

ಒಂದು ದಿನ ಕೂಲಿ ಹೋಗದಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ಹಾಗಿದ್ದರೂ ಕೂಡಾ ಅಲ್ಲಿನ ಕೂಲಿ ಕಾರ್ಮಿಕರು ಕಾನೂನು ಅರಿವು ತಿಳಿದುಕೊಳ್ಳಲು ಬಂದಿದ್ದರು. ಕಾರ್ಯಕ್ರಮ ರದ್ದಾಗಿರುವುದನ್ನು ಕೇಳಿ ಬೇಸರಗೊಂಡು ಮರಳಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಆತಂಕ ಸೃಷ್ಟಿಸಿದ್ದ ಸೆನ್ಸಾರ್ ಸೂಟ್‌ಕೇಸ್; ಲಘು ಸ್ಫೋಟದ ಮೂಲಕ ನಾಶ
“ಕಾರ್ಯಕ್ರಮ ರದ್ದಾಗಿರುವುದರ ಹಿಂದೆ ಕಾಣದ ಕೈಗಳ ಕೆಲಸ ನಡೆದಿದೆ. ಇಲ್ಲಿ ನೆಮ್ಮದಿಯಿಂದ ಬದುಕುತ್ತಿರುವ ಜನರ ಮಧ್ಯೆ ರಾಜಕೀಯ ತರುವುದು ಸರಿಯಿಲ್ಲ. ರಾಜಕೀಯ ನಡೆಸಿ ಅಧಿಕಾರಿಗಳನ್ನು ಕುಗ್ಗಿಸುವ ಕೆಲಸಗಳು ನಡೆಯುತ್ತಿವೆ. ಅಧಿಕಾರಿ ವರ್ಗ ಹಾಗೂ ಎಲ್ಲ ಇಲಾಖೆಯವರು ಮುಂಚೂಣಿಯಲ್ಲಿ ನಿಂತು ಕಾನೂನು ಅರಿವು ಕಾರ್ಯಕ್ರಮ ನಡೆಸಬೇಕು. ಆದರೆ ಇಲ್ಲಿ ಅಧಿಕಾರಿಗಳಿಂದ ಜನರಿಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ” ಎಂದು ಸುತ್ತಮುತ್ತಲಿನ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.