ಎತ್ತಿನಗಾಡಿ ಮೆರವಣಿಗೆಯ ವಿಡಿಯೋ ಮಾಡಲು ಹೋಗಿ ಎತ್ತಿನಗಾಡಿಯ ಅಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟ ಗಡೀಹಳ್ಳಿ ಗ್ರಾಮದ ಬಳಿ ನಡೆದಿದೆ.
ಗಡೀಹಳ್ಳಿ ಗ್ರಾಮದ ರವಿ (40) ಎಂಬಾತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಡಿಹಳ್ಳಿ ಗ್ರಾಮದಿಂದ ಅಂತರಘಟೆಗೆ ಎತ್ತಿನಗಾಡಿ ಓಡಿಸುವಾಗ ರಸ್ತೆ ಮಧ್ಯೆ ನಿಂತು ಮೆರವಣಿಗೆಯ ವಿಡಿಯೋ ಮಾಡುತ್ತಿದ್ದ ರವಿ ಮೇಲೆ ಎತ್ತಿನಗಾಡಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎತ್ತಿನಗಾಡಿ ಮೆರವಣಿಗೆಯ ವಿಡಿಯೋ ಮಾಡಲು ಹೋಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟ ಗಡೀಹಳ್ಳಿ ಗ್ರಾಮದ ಬಳಿ ನಡೆದಿದೆ. ಗಡೀಹಳ್ಳಿ ಗ್ರಾಮದ ರವಿ (40) ಎಂಬಾತ ಮೃತ ದುರ್ದೈವಿ. pic.twitter.com/Hsew2Kvp76
— eedina.com ಈ ದಿನ.ಕಾಮ್ (@eedinanews) February 8, 2025
ಕಡೂರು ತಾಲೂಕಿನ ದುರ್ಗಾಂಬ ಜಾತ್ರೆಗೆ ಎತ್ತಿನ ಗಾಡಿಗಳ ಮೂಲಕ ಭಕ್ತಾದಿಗಳು ಸಾಮಾನ್ಯವಾಗಿದ್ದು, ಈ ಜಾತ್ರೆಗೆ ಎತ್ತಿನ ಗಾಡಿಯ ಮೂಲಕ ಭಕ್ತಾಧಿಗಳು ಬರುವುದು ವಿಶೇಷ. ಐತಿಹಾಸಿಕ ಅಂತರಘಟ್ಟ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಪ್ರತಿ ವರ್ಷ ನಡೆಯುತ್ತದೆ. ಅದೇ ರೀತಿಯಲ್ಲಿ ಈ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತಿನಗಾಡಿ ಓಡಿಸುವ ಸಂಪ್ರದಾಯವಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ʼಸೂಸಲವಾನಿʼ ಗ್ರಾಮದ ರಸ್ತೆಗಿಲ್ಲ ಡಾಂಬರು ಭಾಗ್ಯ; ಗ್ರಾಮಸ್ಥರ ಅಳಲು ಕೇಳೋರೆ ಇಲ್ಲ
ಜಾತ್ರೆಯು ಪ್ರಾರಂಭವಾಗುವ ತಿಂಗಳ ಮುಂಚೆ ಭಕ್ತಾಧಿಗಳು ಲಕ್ಷ ಲಕ್ಷ ರೂಪಾಯಿ ಕೊಟ್ಟು ಹೊಸ ಎತ್ತುಗಳನ್ನು ಕೊಂಡುಕೊಂಡು, ಎತ್ತಿನಗಾಡಿಯನ್ನು ಸಿಂಗರಿಸಿ ಜಾತ್ರೆಗೆ ಇತರೆ ಎತ್ತಿನ ಗಾಡಿಗಳೊಂದಿಗೆ ನಾಮುಂದು ತಾಮುಂದೆಂದು ಹೋಗುವರು ಹೀಗೆ ಅಜ್ಜಂಪುರ ತಾಲ್ಲೂಕು ಗಡೀಹಳ್ಳಿಗ್ರಾಮದಲ್ಲೂ ಜಾತ್ರೆಗೆ ಪ್ರತಿವರ್ಷ ಎತ್ತಿನಗಾಡಿ ಹೋಡುವುದು ಸಾಮಾನ್ಯವಾಗಿದ್ದು ಜಾತ್ರೆಗೆ ಹೊರಡುವ ಮುನ್ನ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ಎತ್ತಿನ ಗಾಡಿಗಳು ಹೋಗಿ ಪೊಜೆ ಮಾಡಿಸಿಕೊಂಡು ಅಲ್ಲಿಂದ ಬರುವಾಗ ಗಡಿಹಳ್ಳಿ ಗ್ರಾಮದಲ್ಲಿಯೇ ಅದೇ ಗ್ರಾಮದ ಮೃತ ರವಿ ಗಾಡಿಯ ಜೊತೆ ಓಡಿಬರುವಾಗ ಪಕ್ಕದಲ್ಲಿನ ಇನ್ನೊಂದು ಎತ್ತಿನಗಾಡಿಯ ನೊಗ ತಾಗಿ ಕೆಳಗೆ ಬಿದ್ದಿದ್ದು, ಆ ಗಾಡಿಯು ಅವನ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡಿದ್ದ ಅವರು ಸಾವನಪ್ಪಿದ್ದಾರೆ. ಘಟನೆಯ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮೃತನಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
