ಚಿಕ್ಕಮಗಳೂರು | ರೈತ, ದಲಿತ, ಆದಿವಾಸಿಗಳ ಬೃಹತ್‌ ಸಮಾವೇಶ

Date:

Advertisements
  • ʼಜನರ ಏಳಿಗೆಗೆ ದುಡಿಯುವವರಿಗೆ ಮತ ನೀಡಬೇಕುʼ
  • ʼಮತ ಮಾರಿಕೊಳ್ಳುವವರನ್ನು ಬಹಿಷ್ಕಾರ ಮಾಡಬೇಕುʼ

ಬಡಜನರು ಸೂರಿಗಾಗಿ ಮತ್ತು ಭೂಮಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜಕಾರಣಿಗಳು ಹಣ ಮತ್ತು ತೋಳ್ಬಲದಿಂದ ಇವತ್ತು ಅಧಿಕಾರಕ್ಕೆ ಬರುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮುಖಾಮುಖಿಯಾಗಿ ಚರ್ಚೆಸುವ ಉದ್ದೇಶದಿಂದ ‘ಮಲೆನಾಡಿಗರ ಬೃಹತ್ ಆಗ್ರಹ ಸಮಾವೇಶ’ ಆಯೋಜಿಸಿದ್ದೆವು. ಆದರೆ, ಅವರು ಬಂದಿಲ್ಲ. ಜನರಿಗೆ ಮುಖ ತೋರಿಸಲು ಅವರಿಗೆ ಯೋಗ್ಯತೆಯಿಲ್ಲ ಎಂದು ಸಮಾವೇಶದ ಉಸ್ತುವಾರಿ ಗೌಸ್‌ ಮೊಹಿದ್ದೀನ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ರೈತ, ದಲಿತ, ಆದಿವಾಸಿ ಸಂಘಟನೆಗಳ ಮುಖಂಡರು ‘ಮಲೆನಾಡಿಗರ ಬೃಹತ್ ಆಗ್ರಹ ಸಮಾವೇಶ’ ಆಯೋಜಿಸಿದ್ದರು. ಸಮಾವೇಶದಲ್ಲಿ ಗೌಸ್‌ ಮೊಹಿದ್ದೀನ್ ಮಾತನಾಡಿದರು. “ಪ್ರಸ್ತುತದಲ್ಲಿ ಪ್ರಭುತ್ವವು ಮೂಲಭೂತವಾದಿಯಾಗಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಎಷ್ಟು ಜನಕ್ಕೆ ಭೂಮಿ ಕೊಟ್ಟಿದ್ದೀರಿ, ಎಷ್ಟು ಜನಕ್ಕೆ ಮನೆ, ನಿವೇಶನ ಕೊಟ್ಟಿದ್ದೀರಿ ಎಂದು ನಾವೆಲ್ಲರೂ ಎಲ್ಲ ಪಕ್ಷದವರಿಗೆ ಪ್ರಶ್ನೆ ಮಾಡಬೇಕು. ಅದನ್ನು ಪ್ರಮಾಣಿಕವಾಗಿ ಯಾರು ಜಾರಿ ಮಾಡುತ್ತಾರೆಂದು ಅನಿಸುತ್ತದೋ ಅವರಿಗೆ ಮಾತ್ರ ನಾವು ಮತ ನೀಡಬೇಕು. ಜನರ ಏಳಿಗೆಗಾಗಿ ಯಾರು ದುಡಿಯುತ್ತಾರೋ ಅವರಿಗೆ ಮತ ನೀಡಬೇಕು” ಎಂದು ಎಚ್ಚರಿಕೆ ನೀಡಿದರು.

“ಬದುಕು, ನೆಮ್ಮದಿಯ ನಾಳೆಗಾಗಿ ಹಕ್ಕುಪತ್ರ ಇಲ್ಲದೆ ಮಲೆನಾಡಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಭೂಮಿ ಇಲ್ಲದೆ ಜೀವನ ನಡೆಸಲು ಕಷ್ಟಕರವಾಗಿದೆ” ಎಂದು ವೆಂಕಟೇಶ್‌ ಹಾಗಲಗಂಚಿ ತಿಳಿಸಿದ್ದಾರೆ.

Advertisements

ಆಮ್‌ ಆದ್ಮಿ ಪಕ್ಷದ ಸುಂದರೇಶ್‌ ಗೌಡ್ರು ಮಾತನಾಡಿ, “ಭಾರತದಲ್ಲಿ ಹುಟ್ಟಿದ ಪ್ರತಿ ಮಗುವಿಗೂ ದೆಹಲಿಯಲ್ಲಿ ಸಿಗುವಂತಹ ಉಚಿತ ಆರೋಗ್ಯ, ಶಿಕ್ಷಣ, ಬದುಕಿಗೆ ಆಶ್ರಯ ಸಿಗಬೇಕು. ನಮ್ಮ ಪಕ್ಷ ಇದಕ್ಕೆ ಶೇ.100ರಷ್ಟು ಭರವಸೆ ಕೊಡುತ್ತದೆ” ಎಂದು ಹೇಳಿದರು.

“ಭ್ರಷ್ಟಾಚಾರಕ್ಕೆ ತೊಡಗಿರುವ ಪಕ್ಷಗಳನ್ನು ಮುಟ್ಟುಗೋಲು ಹಾಕುತ್ತೇವೆ. ಮತದಾನದ ಹಕ್ಕನ್ನು ಸಂವಿಧಾನ ನೀಡಿದೆ. ಸಂವಿಧಾನದ ಉಳಿಯಬೇಕೆಂದರೆ, ಮತದಾನ ಬಹಿಷ್ಕಾರ ಮಾಡಬಾರದು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು” ಎಂದು ಹೇಳಿದರು.

“ಅರಣ್ಯ ಹಕ್ಕು ಕಾಯಿದೆಯಲ್ಲಿ ಭೂಮಿ, ವಿದ್ಯುತ್‌, ನೀರು, ಕೃಷಿ ಅಳವಡಿಸಿದ್ದರೆ ಅದನ್ನು ಸ್ಥಳದಿಂದ ರವಾನಿಸುವಂತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕುದುರೆಮುಖ ರಾಷ್ಟ್ರೀಯ ಯೋಜನೆ ಹೊರತು ಪಡಿಸಿ ಸ್ವತಂತ್ರ್ಯ ಪೂರ್ವ ಜನಸಂಖ್ಯೆ 35 ಕೋಟಿ ದಾಟಿದೆ. ಜನರಿಗೆ ಆಹಾರ ಕೊರತೆ ಹೆಚ್ಚಾಗಿದೆ. ಹಾಗಾಗಿ ಭೂಮಿ ಮಂಜೂರು ಮಾಡಬೇಕು. ಜನರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಕೃಷಿ, ತೋಟಗಾರಿಕೆ ಬೆಳೆಗೆ ಜಾಗ ಕೊಟ್ಟಿರುವಂತಹ ಹಲವು ಉದಾಹರಣೆಗಳಿವೆ” ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಪ್ರಾಣಿ-ಪಕ್ಷಿಗಳಿಂದ ಬೆಳೆ ರಕ್ಷಿಸಲು ಮೈಕ್‌ ಮೊರೆಹೋದ ರೈತರು

ಜನರಿಗೆ ಅನ್ನ ಕೊಡಕೆ ಆಗುತ್ತ, ರೈತನ ಮನೆ ಹಾಳು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಸರ್ಕಾರ ಆಗಿರಬಹುದು. ನಾವು ಕೆಲಸ ನಡೆಸುತ್ತಾ ಇರುವಾಗ ಅರ್ಧ ಕೆಲಸ ಮುಗಿಸಿದ ನಂತರ ಅರಣ್ಯ ಇಲಾಖೆಯವರು ತಡೆಯಿಡುತ್ತಾರೆ. ಮುಂದಿನ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X