ಪ್ರತಿವರ್ಷವೂ ಅದ್ದೂರಿಯಿಂದ ಶ್ರೀ ದೇವೀರಮ್ಮ ದೀಪೋತ್ಸವ ಕಾರ್ಯಕ್ರಮವು ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ಗ್ರಾಮದಲ್ಲಿ ನಡೆಯುತ್ತದೆ. ಅದೇ ರೀತಿಯಲ್ಲಿ ಈ ವರ್ಷ ಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ದಿಪೋತ್ಸವ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಭದ್ರತಾ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆಯವರು, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ದೇವಿರಮ್ಮ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದರು. ಬಳಿಕ ಪ್ರವಾಸಿಗರು ಸಾಗುವ ಬೆಟ್ಟದ ಹಾದಿಯನ್ನು ಪರಿಶೀಲನೆ ನಡೆಸಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಇದನ್ನೂ ಓದಿದ್ದೀರಾ:ಹಾಸನ | ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್; ಜೆಡಿಎಸ್ ವಕ್ತಾರ ಎಸ್‌ಪಿಗೆ ದೂರು
ಬೆಟ್ಟ ಹತ್ತಲು ಭಕ್ತಾದಿಗಳು ನಡೆದುಕೊಂಡು ಹೋಗುವ ದಾರಿ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ದರ್ಶನದ ವೇಳೆ ದೇವಸ್ಥಾನದಲ್ಲಿ ನೂಕು ನುಗ್ಗಲು ಆಗದಂತೆ, ಆ್ಯಂಬುಲೆನ್ಸ್ ನಿಯೋಜನೆ, ಸುರಕ್ಷತಾ ಕ್ರಮಗಳು ಹಾಗೂ ಇತರೆ ಸಿದ್ಧತೆಗಳನ್ನು ನಿಯೋಜಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
