ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಆರೋಪಿಯನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ದಂಟರಮಕ್ಕಿಯ ಜ್ಯೋತಿ ನಗರದಲ್ಲಿ ಭಾನುವಾರ ನಡೆದಿದೆ.
ನಗರದ ಬೇರೆ ಬೇರೆ ಭಾಗದಿಂದ ಮಹಿಳೆಯರನ್ನು ಕರೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಫೌಸಿಯ (34) ಬಂಧಿತ ಆರೋಪಿ. ಬಿಎನ್ಎಎಸ್ ಹಾಗೂ ಐಟಿಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಓರ್ವ 35 ವರ್ಷದ ಸಂತ್ರಸ್ಥ ಮಹಿಳೆ ಹಾಗೂ ಇನ್ನಿತರರನ್ನು ರಕ್ಷಿಸಲಾಗಿದೆ.
ಮನೆ ಬಾಡಿಗೆ ನೀಡುವಾಗ ಬಾಡಿಗೆದಾರರ ಗುಣ, ನಡತೆ ಬಗ್ಗೆ ನಿಗಾ ಇಡುವಂತೆ ಮತ್ತು ಯಾವುದೇ ತರಹದ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸರಿಗೆ ತಿಳಿಸಬೇಕೆಂದು ಹಾಗೂ ಇಂತಹ ಸಂದರ್ಭಗಳಲ್ಲಿ ಮಾಹಿತಿದಾರರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾ ಪೊಲೀಸ್ ಮನವಿ ಮಾಡಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಾಮಾಚಾರ ಶಂಕೆ ಮಹಿಳೆ ಅತ್ಮಹತ್ಯೆ
ಕಾರ್ಯಾಚಾರಣೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪಿಐ ಅಭಯಪ್ರಕಾಶ್ ಸೋಮನಾಳ್, ಮಹಿಳಾ ಠಾಣೆಯ ಪಿಎಸ್‌ಐ ನಂದಿನಿ, ಪಿಎಸ್‌ಐ ಗಾಯತ್ರಿ, ಸಿಬ್ಬಂದಿಗಳಾದ ಎಎಸ್‌ಐ ಪ್ರಸನ್ನ, ಅಬ್ದುಲ್ ಖಾದರ್, ಜಯಕುಮರ್ ಎಹೆಚ್ ಸಿ, ವಿದ್ಯಾ, ಜ್ಯೋತಿ ಮಪಿಸಿ ಇನ್ನಿತರರಿದ್ದರು.
