ಚಿಕ್ಕಮಗಳೂರು ಜಿಲ್ಲೆಯ ಅಲ್ಲೂರು ಪಟ್ಟಣದಲ್ಲಿ ಎರಡು ಸಮುದಾಯಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲೂರು ಪಿಎಸ್‌ಐ ಸರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘವು ಆಲ್ಲೂರು ಪಿಎಸ್‌ಐ ಅಮಾನತು ಮಾಡುವಂತೆ ಒತ್ತಾಯಿಸುತ್ತಿದೆ ಎಂಬುದಕ್ಕೆ ಸಂಬಂಧಿಸಿಂತೆ ಮಾತನಾಡಿದ ಅವರು, “ಅಲ್ಲೂರು ಪಟ್ಟಣದ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕೆಂಬ ಒತ್ತಾಯ ಒಕ್ಕಲಿಗ ಸಮುದಾಯದ ಒತ್ತಾಯವಲ್ಲ, ಒಕ್ಕಲಿಗರ ಸಂಘದ ಅಧ್ಯಕ್ಷರ ವೈಯಕ್ತಿಕ ಒತ್ತಾಯ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪುರಸಭೆ ಅಧಿಕಾರಿಗಳ ಏಕಾಏಕಿ ದಾಳಿ; ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ
“ಎರಡು ಸಮುದಾಯಗಳ ಘಟನೆಯನ್ನು ಕುರಿತು ಸೌಹಾರ್ದಯುತವಾಗಿ ಬಗೆಹರಿಸಬೇಕು. ಈ ವಿಚಾರವಾಗಿ ಶಾಸಕಿ ನಯನ ಮೋಟಮ್ಮ ಅವರೊಂದಿಗೆ ಮಾತನಾಡುತ್ತೇನೆ. ಅಲ್ಲೂರಿಗೆ ತನ್ನದೇ ಆದ ಇತಿಹಾಸವಿದೆ. ಅಲ್ಲೂರಿನ ಬಸಪ್ಪ ಶೆಟ್ಟಿ, ಸಿಎ ಚಂದ್ರೇಗೌಡ, ಸಿ ಟಿ ರವಿ ಅವರು ಎಂಎಲ್‌ಎಗಳಾದ್ದರು. ನಾನು ಅಲ್ಲೂರಿನ ಅಳಿಯ. ಈ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು. ದಲಿತ ಮುಖಂಡರೊಂದಿಗೆ ಮಾತನಡುತ್ತೇನೆ” ಎಂದು ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ ತಿಳಿಸಿದರು.