ಕಾಣೆಯಾಗಿದ್ದ ಇಬ್ಬರು ಮಕ್ಕಳು ರಿಂಗ್ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್‌ನಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಕುಟುಂಬವೊಂದು ಅಮ್ಮಡಿ ಎಸ್ಟೇಟ್‌ಗೆ ಕೂಲಿ ಕೆಲಸಕ್ಕೆಂದು ಬಂದಿತ್ತು. ಎಂದಿನಂತೆ ಮಕ್ಕಳ ತಾಯಿ ಮಂಗಳವಾರ ಬೆಳಿಗ್ಗೆ ಬಟ್ಟೆ ತೊಳೆಯಲು ಬಂದಿದ್ದಾರೆ. ತಾಯಿಯೊಂದಿಗೆ 5 ವರ್ಷದ ಬಾಲಕಿ ಹಾಗೂ ಒಂದು ವರ್ಷದ ಮಗು ಜೊತೆಯಲ್ಲಿ ಬಂದಿದ್ದರು.
ಮಕ್ಕಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ಹುಡುಕಿದ್ದಾರೆ. ಸಂಜೆ ವೇಳೆ ಮಕ್ಕಳ ತಾಯಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಗೊತ್ತಿಲ್ಲದೆ ಮಕ್ಕಳು ಆಯತಪ್ಪಿ ಬಾವಿಗೆ ಬಿದ್ದರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೋಷಕರ ನಿರ್ಲಕ್ಷ್ಯಕ್ಕೆ ಎರಡು ಮುಗ್ಧ ಮಕ್ಕಳು ಜೀವ ಕಳೆದುಕೊಂಡಿವೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಕ್ಕಳ ಎದುರೇ ಗೃಹಿಣಿ ಹತ್ಯೆ; ಆರೋಪಿ ಪ್ರಿಯಕರನಿಗಾಗಿ ಹುಡುಕಾಟ
ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶವ ಮೇಲೆತ್ತುವ ಕಾರ್ಯಾಚರಣೆ ನಡೆದಿದ್ದು, ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
