ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಳ್ಳಿಯ ಉಡವಾ ಗ್ರಾಮದಲ್ಲಿ ನಡೆದಿದೆ.
ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೂರು ದಿನಗಳ ಹಿಂದೆಯೇ ಕಾಡಾನೆಯೊಂದು ಕಂದಕಕ್ಕೆ ಉರುಳಿ ಬಿದ್ದು ಸಾವನ್ನಪ್ಪಿದೆ. ಆದರೂ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿಯೇ ಇಲ್ಲ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು l ಯಾವುದೇ ಅವೈಜ್ಞಾನಿಕ ವರದಿ, ಕಾಯ್ದೆ ಜಾರಿ ಮಾಡಬಾರದು: ಕೆ ಎಲ್ ಅಶೋಕ್
“ಇದೀಗ ತರೀಕೆರೆ ತಾಲೂಕಿನಲ್ಲಿ ಎರಡು ಕಾಡಾನೆಗಳು ಮೃತಪಟ್ಟಿದ್ದು, ಒಂದೆಡೆ ಕಾಡಾನೆ ದಾಳಿಯಿಂದ ಮನುಷ್ಯರು ಮೃತಪಟ್ಟರೆ, ಮತ್ತೊಂದೆಡೆ ವಿದ್ಯುತ್ ಅವಘಡಗಳಿಂದ ಕಾಡಾನೆಗಳು ಸಾವನಪ್ಪುತ್ತಿವೆ. ಈ ಕುರಿತು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
