ಚಿಕ್ಕನಾಯಕನಹಳ್ಳಿ | ಕಾಡುಹಂದಿ ಅಡ್ಡಬಂದು ಅಪಘಾತ ; ಗುಂಡಿಗೆ ಉರುಳಿಬಿದ್ದ ಪ್ರಯಾಣಿಕರ ಆಟೋ

Date:

Advertisements

 ಸೋಮವಾರ ಸಂಜೆ 7.00 ಗಂಟೆಯ ಸುಮಾರಿನಲ್ಲಿ ತರಬೇನಹಳ್ಳಿ-ಗೋಡೆಕೆರೆ ಗೇಟ್ ಮಧ್ಯದಲ್ಲಿ ಸಿಗುವ ಅರಣ್ಯ ಇಲಾಖೆಯ ನರ್ಸರಿ ಬಳಿ ಕಾಡುಹಂದಿ ಅಡ್ಡಬಂದ ಪರಿಣಾಮ ಚಿಕ್ಕನಾಯಕನಹಳ್ಳಿ ಕಡೆ ಸಾಗುತ್ತಿದ್ದ ಪ್ರಯಾಣಿಕರ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಗುಂಡಿಗೆ ಬಿದ್ದಿದೆ. ಆಟೋದಲ್ಲಿ ಚಾಲಕ ಚಂದ್ರಶೇಖರ್ ಸೇರಿದಂತೆ ಮೂವರು ಗಾರ್ಮೆಂಟ್ಸ್ ನೌಕರ ಮಹಿಳೆಯರು ಪ್ರಯಾಣಿಸುತ್ತಿದ್ದರು. 

1000758419

ಕಂದಿಕೆರೆ-ಸಾದರಹಳ್ಳಿ ಮೂಲದ ಆಟೋ ಚಾಲಕ ಚಂದ್ರಶೇಖರ್(35) ಹಾಗೂ ಗೌರಸಾಗರ-ತಿಮ್ಮನಹಳ್ಳಿ ಗ್ರಾಮದ ವಸಂತಮ್ಮ (33), ಮಂಜುಳ(29), ಶೋಭಾ(30) ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

ಗಾಯಾಳುಗಳು ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ಡಾ.ಉಮೇಶ್, ಆಟೊದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಅದನ್ನು ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.

Advertisements
1000758418

ಕಿಬ್ಬನಹಳ್ಳಿ ಕ್ರಾಸ್ ಬಳಿಯಿರುವ ಮ್ಯಾಫ್ ಗಾರ್ಮೆಂಟ್ಸ್ ಹೆಸರಿನ ಉಡುಪು-ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಲು ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ ಹಾಗೂ ಶೆಟ್ಟಿಕೆರೆ ಭಾಗದಿಂದ ನಿತ್ಯ ಬೆಳಗ್ಗೆ ಸಾವಿರಾರು ಮಹಿಳೆಯರು ತೆರಳುತ್ತಾರೆ. ಅವರನ್ನು ಸಾಗಿಸಲು ಇರುವ ಏಕೈಕ ವ್ಯವಸ್ಥೆಯಂದರೆ, ಖಾಸಗಿ ಆಟೋಗಳು. ಆ ಆಟೋ ಚಾಲಕರು ಕೆಲಸದ ಸಮಯಕ್ಕೆ ಸರಿಯಾಗಿ ಫ್ಯಾಕ್ಟರಿಗೆ ತಲುಪುವುದಕ್ಕೋಸ್ಕರ ಪೈಪೋಟಿಯ ವೇಗದಲ್ಲಿ ಆಟೊ ಚಾಲನೆ ಮಾಡುತ್ತಾರೆ.‌ ಹೀಗಾಗಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಕಿಬ್ಬನಹಳ್ಳಿ-ಚಿ ನಾ ಹಳ್ಳಿ-ಹುಳಿಯಾರು ಮಾರ್ಗದ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುವ ಹಲವು ಮುಖ್ಯ ಅಂಶಗಳಲ್ಲಿ ಇದೂ ಒಂದು ಮುಖ್ಯ ಅಂಶವಾಗಿದೆ.

ಆಟೊ ಅಧ್ಯಕ್ಷ ಮಂಜುನಾಥ್ ಆಕ್ರೋಶ :

1000758387

ನಿರುದ್ಯೋಗದ ಸಮಸ್ಯೆಯಿಂದ ‌ಕುಟುಂಬ ನಿರ್ವಹಣೆಗಾಗಿ ಪಡಿಪಾಟಲು ಪಡುತ್ತಿರುವ ಗ್ರಾಮೀಣ ಭಾಗದ ಮಹಿಳೆಯರು, ತಮ್ಮ ಆರ್ಥಿಕ ಸ್ವಾವಲಂಬನೆಗೆ ನೆಚ್ಚಿಕೊಂಡಿರುವ ಏಕೈಕ ಉದ್ಯೋಗವೆಂದರೆ, ಗಾರ್ಮೆಂಟ್ಸ್ ಕೆಲಸ. ಕಿಬ್ಬನಹಳ್ಳಿ ಸನಿಹದಲ್ಲೇ ಇರುವ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ದುಡಿಯುವ ಮಹಿಳೆಯರಿಗೆ ಸಕಾಲಕ್ಕೆ ಒದಗಿಬರುವ ಸಾರಿಗೆಯೇ ನಮ್ಮ ಆಟೊ-ರಿಕ್ಷಾಗಳು. ಹಾಗಾಗಿ, ಅವರು ದಿನಾಬೆಳಗ್ಗೆ ಮತ್ತು ಸಂಜೆ ಆಟೊಗಳಲ್ಲೇ ಕೆಲಸಕ್ಕಾಗಿ ಪ್ರಯಾಣ ಮಾಡುತ್ತಾರೆ. ಮತ್ತು ಆಟೊರಿಕ್ಷಾ ದುರಂತವೇನೆಂದರೆ, ಅವು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲು ವೇಗದ ಪೈಪೋಟಿಗಿಳಿಯುವುದು. ಹೀಗಾಗಿ, ಏಕಾಏಕಿ ಅಡ್ಡಬರುವ ಗುಡ್ಡಗಾಡು ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುವುದಲ್ಲದೆ ಪ್ರಯಾಣಿಕರು ಬಲಿಯಾಗುತ್ತಾರೆ. ಇದು, ಆಟೊಚಾಲಕ ಮತ್ತು ಮಾಲೀಕ ಹಾಗೂ ಪ್ರಯಾಣಿಕ ಎಲ್ಲರ ದುರ್ದೈವ ಎಂದು ಆಟೊ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್ ವ್ಯವಸ್ಥೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪುರಸಭಾ ಸದಸ್ಯ ಮಹಮದ್ ಹುಸೇನ್ ಒತ್ತಾಯ :

1000758386

ಗಾರ್ಮೆಂಟ್ಸ್ ಫ್ಯಾಕ್ಟರಿಯ ನೌಕರರಿಗೆ ಸೂಕ್ತ ಪ್ರಯಾಣದ ವ್ಯವಸ್ಥೆಯನ್ನು ಆಯಾಯಾ ಫ್ಯಾಕ್ಟರಿಗಳೇ ಕಲ್ಪಿಸಿಕೊಡುವಂತಾಗಬೇಕು. ಅಕಸ್ಮಾತ್ ಅಪಘಾತಗಳಾದಾಗ ಶೀಘ್ರವೇ ಆ್ಯಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಮತ್ತು ಚಿಕಿತ್ಸಾ ಭತ್ಯೆ, ವಿಮಾ ಸೌಲಭ್ಯ ಒದಗಿಸಿಕೊಡಬೇಕು. ಅಂದಾಜಿನಂತೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಿಗೆ ಸೇರಿದ ಕಿಬ್ಬನಹಳ್ಳಿಯ ಸುತ್ತಮುತ್ತ ಇರುವ ಬಹುತೇಕ ಗ್ರಾಮಗಳಿಂದ ಸುಮಾರು 3000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಫ್ಯಾಕ್ಟರಿಗಳಿಗೆ ನಿತ್ಯ ಕೆಲಸಕ್ಕೆ ಬರುತ್ತಾರೆ. ಇವರೆಲ್ಲರ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಯಾರೂ ಕಾಳಜಿ ವಹಿಸುತ್ತಿಲ್ಲ. ಇವರಲ್ಲಿನ ಹೆಚ್ಚಿನವರು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬಡ ಹೆಣ್ಣುಮಕ್ಕಳು. ನಿತ್ಯದ ಮನೆ ಕೆಲಸ ಮುಗಿಸಿ ಫ್ಯಾಕ್ಟರಿಗೆ ದುಡಿಯಲು ಬರುವ ಮತ್ತು ಡ್ಯೂಟಿ ಮುಗಿದ ಮೇಲೆ ಮನೆ-ಮಕ್ಕಳು-ಕುಟುಂಬ ಸೇರಲು ಅವಸರಿಸುವ ಇವರ ಸುರಕ್ಷಿತ ಪ್ರಯಾಣದ ಬಗ್ಗೆ ಕಟ್ಟುನಿಟ್ಟಾದ ಎಚ್ಚರ ವಹಿಸಬೇಕಿದೆ. ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಹಕ್ಕುಗಳ ರಕ್ಷಣಾ ಆಯೋಗಗಳು ತಕ್ಷಣ ಇತ್ತ ಗಮನ ಹರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಕಡೇಪಕ್ಷ, ನಮ್ಮ ಗ್ರಾಮೀಣ ಮಹಿಳೆಯರ ಆರ್ಥಿಕ-ಸ್ವಾವಲಂಬನೆಗೆ ಪುಷ್ಟಿ ನೀಡುವಂಥ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿಯೇ ಕಲ್ಪಿಸಿಕೊಡಲು ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸಂಘದ ರಾಜ್ಯಕಾರ್ಯದರ್ಶಿ ಮತ್ತು ಪುರಸಭಾ ಸದಸ್ಯ ಮಹಮದ್ ಹುಸೇನ್ ಒತ್ತಾಯಿಸಿದರು.

ವರದಿ – ಸಂಚಲನ

ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X