ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳನ್ನು ಕಳೆದರು ಬಸ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ, ಕಾರ್ಮಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಕೊನೆಗೂ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಆರಂಭವಾಗಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ, ಈ ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲದೆ ಇಲ್ಲಿನ ನಿವಾಸಿಗಳು ತುಂಬಾ ತೊಂದರೆ ಅನುಭವಿಸಿದ್ದರು. ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರಿಗೆ ತೆರಲು ಸಾರಿಗೆ ಸಂಪರ್ಕವಿಲ್ಲದೆ ದಶಕಗಳಿಂದ ಇಲ್ಲಿನ ಜನ ಪಟ್ಟ ಯಾತನೆ ಅಷ್ಟಿಟಲ್ಲ. ಅನಿವಾರ್ಯವಿದ್ದಾಗ ಇಲ್ಲಿ ಜನ ಆಟೋ, ಟೆಂಪೋ ಗಳ ಮೊರೆಹೋಗಿದ್ದರು. ರೋಗಿಗಳು, ವೃದ್ಧರನ್ನು ಕರೆದುಕೊಂಡು ಹೋಗಲು ಊರಿನ ಬೈಕ್ ಕಾರು, ಉಳ್ಳವರನ್ನು ಆಶ್ರಯಿಸಿದ್ದರು.

ಹುಳಿಯಾರು ಮಾರ್ಗದ ಮೂಲಕ ಬೆಂಗಳೂರಿನಿಂದ ಹೊಸದುರ್ಗಕ್ಕೂ, ಹೊಸದುರ್ಗದಿಂದ ಬೆಂಗಳೂರಿಗೂ ನಿತ್ಯ ನೂರಾರು ಬಸ್‌ಗಳು ಓಡಾಡುತ್ತವೆ. ಅದೇ ಮಾರ್ಗದ ಹೊಸದುರ್ಗದಿಂದ ಹುಳಿಯಾರು, ಬರಕನಹಾಲ್ ತಿಮ್ಮನಹಳ್ಳಿ, ಕಂದಿಕೆರೆ, ಸಾಲಕಟ್ಟೆ ಕ್ರಾಸ್, ಚಿಕ್ಕನಾಯಕನಹಳ್ಳಿ ಹೀಗೆ ಬೆಳಿಗ್ಗೆ 7 ಗಂಟೆಗೆ ಮತ್ತು ಸಂಜೆ ಸಮಯಕ್ಕೆ ಹಿಂತಿರುಗುವಂತೆ ಅದೇ ಮಾರ್ಗವಾದ ಸಾಲಕಟ್ಟೆ ಕ್ರಾಸ್, ಕಂದಿಕೆರೆ, ತಿಮ್ಮನಹಳ್ಳಿ, ಬರಕನಹಾಲ್, ಹುಳಿಯಾರು, ಹೊಸದುರ್ಗ ಬದಲಾಯಿಸಿದರೆ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ತುಮಕೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಸಾಮಾಜಿಕ ಹೋರಾಟಗಾರ ಸಬ್ಬೆನಹಳ್ಳಿ ಶ್ರೀನಿವಾಸ್ ಹಾಗೂ ಕೆ.ಡಿ.ಪಿ ನಾಮಿನಿ ಸದಸ್ಯ ಶಂಕರ್ ಬರಕನಹಾಲ್ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ತಿಪಟೂರಿನಿಂದ ಚಿಕ್ಕನಾಯಕನಹಳ್ಳಿ ಕಂದಿಕೆರೆ, ತಿಮ್ಮನಹಳ್ಳಿ, ಬರಕನಹಾಲ್ ಮಾರ್ಗವಾಗಿ ಹುಳಿಯಾರಿಗೂ ಹುಳಿಯಾರಿನಿಂದ ಬರಕನಹಾಲ್ ಮಾರ್ಗವಾಗಿ ತಿಪಟೂರಿಗೂ ಬೆಳಗ್ಗೆ ಮತ್ತು ಸಂಜೆ ನೂತನ ಮಾರ್ಗ ಆರಂಭಿಸಿದ್ದು ಗ್ರಾಮಸ್ಥರು ಹರ್ಷಕ್ಕೆ ಕಾರಣವಾಗಿದೆ.
ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದ ಎಲ್ಲರನ್ನೂ ಗ್ರಾಮಸ್ಥರು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್, ಪಂಚಾಯತ್ ಸದಸ್ಯರಾದ ಜಗದೀಶ್, ಪುಷ್ಪ ಮಂಜುನಾಥ್ ಹಾಗೂ ಎಲ್ಲಾ ಗ್ರಾಮಸ್ಥರೂ ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು.
