ಸಂವಿಧಾನವು ಅಪಾಯದಲ್ಲಿದೆ ಅದನ್ನು ರಕ್ಷಣೆ ಮಾಡಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ಸಂಚಾಲಕರಾದ ಸಂಜೀವ ಕಾಂಬ್ಲೆ ಹೇಳಿದ್ದಾರೆ.
ಕಾಗವಾಡದಲ್ಲಿ ನಡೆದ ಚಿಕ್ಕೋಡಿ ವಿಭಾಗದ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಸಭೆಯಲ್ಲಿ, ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ, ಜ್ಯೋತಿರಾವ್ ಪುಲೆ, ಬುದ್ಧನ ವಿಚಾರಗಳನ್ನು ಬೆಳೆಸಬೇಕಾಗಿದೆ. ಆರ್.ಎಸ್.ಎಸ್ ಸಂವಿಧಾನ ಬದಲಾವಣೆಗೆ ಪ್ರಯತ್ನಿಸುತ್ತಿದ್ದು, 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ರೋಹಿತ ಬಸನಾಯಕ್, ಪ್ರಭಾಕರ್ ಕಾಂಬ್ಲೆ, ರಾಹುಲ್ ಕಾಂಬ್ಲೆ, ಸಚಿನ್ ಕಾಂಬ್ಲೆ, ಚೇತನ್ ಕಾಂಬ್ಲೆ, ಅನಿಲ್ ಕಾಳೆ ಇವರನ್ನು ಸಂಘಟನೆಯ ವಿವಿದ ಘಟಕಗಳ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಪರಶುರಾಮ ಟೋನಪೆ, ಮಹೇಶ, ಮಾಂಗ, ಸಂಗೀತಾ, ವೆಂಕಟೆಶ ಕಾಂಬ್ಲೆ, ಕಾಂಬ್ಲೆ, ಸಂಗೀತಾ ಕಾಂಬ್ಲೆ ಉಪಸ್ಥಿತರಿದ್ದರು.