ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಎಣ್ಣೆ ಮತ್ತು ಗಾಂಜಾ ನಶೆಯಲ್ಲಿದ್ದ, ಎಂಟರಿಂದ ಹತ್ತು ಮಂದಿ ಯುವಕರ ಗುಂಪು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೈಮೇಲಿನ ಬಟ್ಟೆ ಹರಿದರೂ ಅರಿವಿಲ್ಲದೇ, ಕೆಲವರು ದೊಣ್ಣೆಗಳನ್ನು ಹಿಡಿದು ಎದುರಾಳಿ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನೆಲಕ್ಕುರುಳಿದರೂ ಮತ್ತೆ ಎದ್ದು ಹೊಡೆದಾಡಿದ ದೃಶ್ಯ ಎಲ್ಲರನ್ನು ಭಯಭೀತರನ್ನಾಗಿ ಮಾಡಿತು. ಗಲಾಟೆ ಏಕೆ ಎಂಬುದು ತಿಳಿಯದೆ ಜನರು ಸಮೀಪದಲ್ಲೇ ನಿಂತು ನೋಡುತ್ತಿದ್ದರು. ಹೊಡೆದಾಟದ ವೇಳೆ ಕೆಲವರು ಗಾಯಗೊಂಡರೂ ಯಾರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಓಂಕಾರಮೂರ್ತಿ ಹಲ್ಲೆ ಪ್ರಕರಣ: ಸಿಒಡಿ ತನಿಖೆಗೆ ದಸಂಸ ಒತ್ತಾಯ
ಈ ಭಾಗದಲ್ಲಿ ಪದೇಪದೇ ಜಗಳಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಪೊಲೀಸ್ ಬೀಟ್ ಹೆಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಘಟನೆ ಕುರಿತು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
