ಚಿಕ್ಕಮಗಳೂರು | ಗೇರುಮರಡಿಯಲ್ಲಿ ಗೊಲ್ಲರಹಟ್ಟಿಯ ದೇವಾಲಯ ಪ್ರವೇಶಿಸಿದ ದಲಿತರು

Date:

Advertisements

ಗೇರುಮರಡಿಯಲ್ಲಿ ಗೊಲ್ಲ ಸಮುದಾಯದ ವಾಸಿಸುವ ಬೀದಿಯಲ್ಲಿರುವ ದೇವಾಲಯದ ಬೀಗ ತೆಗೆದು, ದಲಿತರು ದೇವಾಲಯದ ಒಳಗೆ ಪ್ರವೇಶಿಸಿದ್ದಾರೆ. ಗುರುವಾರ, ಪೊಲೀಸರ ಭದ್ರತೆಯಲ್ಲಿ ದಲಿತ ಮುಖಂಡರು ದೇವಾಲಯದ ಬಾಗಿಲು ತೆರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿಯಲ್ಲಿ ಗೊಲ್ಲ ಸಮುದಾಯದ ಬೀದಿಗೆ ಬಂದಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆದಿತ್ತು. ಅಲ್ಲದೆ, ದಲಿತರು ತಮ್ಮ ಬೀದಿಗೆ ಪ್ರವೇಶಿಸಿದ್ದರಿಂದ ಅಶುದ್ಧವಾಗಿದೆ ಎಂದು ಗ್ರಾಮದ ರಂಗನಾಥ ಸ್ವಾಮಿ ದೇವಾಲಯಕ್ಕೆ ಗೊಲ್ಲ ಸಮುದಾಯದ ಮುಖಂಡರು ಬೀಗ ಹಾಕಿದ್ದರು. ಇದು, ದಲಿತರ ಮೇಲಿನ ದೌರ್ಜನ್ಯದ ಪರಮಾವಧಿಯಾಗಿ ಕಾಣಿಸಿಕೊಂಡಿತ್ತು.

ಘಟನೆಯಿಂದಾಗಿ ಗೊಲ್ಲ ಸಮುದಾಯದ ವಿರುದ್ಧ ತರೀಕೆರೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದರು. ಬುಧವಾರ ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ಬಂದ ದಲಿತ ಮುಖಂಡರು, ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದು, ಪೂಜೆ ಸಲ್ಲಿಸಿದ್ದಾರೆ.

Advertisements

ಜನವರಿ 1ರಂದು ಗ್ರಾಮದಲ್ಲಿ ಹಳೆ ಮನೆ ಕೆಡವುವ ಕೆಲಸಕ್ಕೆ ದಲಿತ ಯುವಕ ಮಾರುತಿ ಬಂದಿದ್ದರು. ಈ ವೇಳೆ, ಕೇಬಲ್ ತಂತಿಗೆ ಜೆಸಿಬಿ ತಗುಲಿ ತಂತಿ ತುಂಡಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಗೊಲ್ಲ ಸಮುದಾಯದ ಗುಂಪೊಂದು ಮಾರುತಿ ಮೆಲೆ ಹಲ್ಲೆ ನಡೆಸಿ, ಜೇಬಿನಲ್ಲಿದ್ದ ಹಣವನ್ನು ಕಿತ್ತುಕೊಂಡಿದ್ದರು. ಮಾತ್ರವಲ್ಲದೆ, ಗ್ರಾಮಕ್ಕೆ ಬಂದಿದ್ದಕ್ಕಾಗಿ 1 ಲಕ್ಷ ರೂ. ದಂಡ ಪಾವತಿಸುವಂತೆ ಒತ್ತಾಯಿಸಿದ್ದರು.

ಪ್ರಕರಣ ಸಂಬಂಧ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ 15 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೌಢ್ಯದಲ್ಲಿ ಬದುಕುತ್ತಿದೆ ಗೊಲ್ಲ ಸಮುದಾಯ

ಗೊಲ್ಲ ಸಮುದಾಯದಲ್ಲಿ ಮೂಢನಂಬಿಕೆ ಮನೆ ಮಾಡಿದೆ. ಹಲವಾರು ಅನಿಷ್ಠ ಪದ್ದತಿಗಳನ್ನು ಇಂದಿಗೂ ಸಮುದಾಯ ಆಚರಿಸುತ್ತಿದೆ. ಇದರಲ್ಲಿ ಸಮುದಾಯ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನೂ ಹೇಳತೀರದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ಸಮಯದಲ್ಲಿ, ಮುಟ್ಟಿನ ಸಂದರ್ಭದಲ್ಲಿ ಹಾಗೂ ಮಗುವಿಗೆ ಜನ್ಮವಿತ್ತ ಸಮಯದಲ್ಲಿ ಮಹಿಳೆಯರನ್ನು ಊರಿನ ಹೊರಡೆ ಗುಡಿಸಲಿನಲ್ಲಿ ಇರಿಸಲಾಗುತ್ತದೆ. ಹೆಣ್ಣು ಮಕ್ಕಳಲ್ಲಾಗುವ ನೈಸರ್ಗಿಕ ಕ್ರಿಯೆಯನ್ನು ಸಮುದಾಯವು ಅಶುದ್ಧವೆಂದು ಭಾವಿಸುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X