ಕಾಶ್ಮೀರದ ಪಹಲ್ಗಾಮದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾರುಣ ಹತ್ಯಾಕಾಂಡ ಮತ್ತು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಪಲ್ಯವೆಂದು ಚಿಕ್ಕಮಗಳೂರು ನಗರದಲ್ಲಿ, ರೈತ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪಹಲ್ಗಾಮನಲ್ಲಿ ದಾಳಿಯಿಂದ 26 ಜನ ಅಮಾಯಕರು ಸಾವನ್ನಪ್ಪಿದ್ದಾರೆ. ತುಂಬ ಸೂಕ್ಷ್ಮ ಪ್ರದೇಶವಾಗಿದ್ದರೂ ಕೂಡ ಒಂದು ಸೆಕ್ಯೂರಿಟಿ ಇಲ್ಲದಿರುವುದು ದುಖಃಕರ ಸಂಗತಿ. ಅದೇನೆ ಇರಲಿ ಈ ಘಟನೆ ನಡೆದ ತಕ್ಷಣ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಭೇಟಿ ನೀಡಲು ಪಣ ತೊಟ್ಟಿರುವ ಮೋದಿಯವರ ಕ್ರಮ ನಿಜಕ್ಕೂ ಶ್ಲಾಘನೀಯ. ಪದೇ ಪದೇ ಭಾರತವನ್ನು ಕೆಣಕಿ ಮುಖಭಂಗವನ್ನು ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಈ ಸಾರಿ, ಸರಿಯಾದ ಪಾಠವನ್ನು ಉಗ್ರರಿಗೆ ಕಲಿಸಬೇಕಾಗಿದೆ ಎಂದು ರೈತ ಮುಖಂಡ ಮಹೇಶ್ ಮಾತಾಡಿದರು.
ಭಾರತ ಸರ್ಕಾರದ ಈ ಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ. ಹಾಗೆಯೇ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು 26 ಜನರ ಅಮಾಯಕರ ಸಾವಿಗೆ ಬೇಜವಬ್ದಾರಿ ಹೇಳಿಕೆ ನೀಡಿರುವುದು ದೇಶದ ನಮ್ಮ ದೇಶದ ಭದ್ರತೆಗೆ ದಕ್ಕೆಯುಂಟುಮಾಡಿದೆ. ಕೂಡಲೆ ಸಿದ್ದರಾಮಯ್ಯನವರು ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ರೈತ ಮುಖಂಡ ಪ್ರತಿಭಟನೆಯಲ್ಲಿ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಉಗ್ರರ ದಾಳಿ, ಮೃತ ಮಂಜುನಾಥ್ ರಾವ್ ಕುಟುಂಬಕ್ಕೆ 10 ಲಕ್ಷ ಪರಿಹಾರ: ಸಿಎಂ
ಉಗ್ರರ ದಾಳಿಗೆ ಸಿಲುಕಿದ್ದ, ಪ್ರವಾಸಿಗರನ್ನು ಹಾಗೂ ಅಲ್ಲಿನ ಜನರನ್ನು ಕರೆ ತರುವಲ್ಲಿ ಸಚಿವ ಸಂತೋಷ್ ಲಾಡ್ ಬಹಳ ಶ್ರಮ ವಹಿಸಿದ್ದಾರೆ. ಇದಕ್ಕೆ ರಾಜ್ಯದ ಜನತೆ, ರೈತ ಸಂಘಟನೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾವತಿಯಿಂದ ಅಭಿನಂದನೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ಸಮಿತಿಯ ಸದಸ್ಯ ಗೌಸ್ ಮೊಹಿದ್ದೀನ್ ತಿಳಿಸಿದರು. ಈ ವೇಳೆ ರೈತ ಸಂಘಟನೆ ಮುಖಂಡರು, ಹಲವು ಸಂಘಟಕರು ಹಾಗೂ ಇನ್ನಿತರರಿದ್ದರು.