ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ಕಳಸ-ಹೊರನಾಡು ನಡುವಿನ ರಸ್ತೆಯಲ್ಲಿರುವ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ.
ಸೇತುವೆ ಮುಳುಗಡೆಯಾಗಿರುವ ಪರಿಣಾಮ ಹಳುವಳ್ಳಿಯಿಂದ ಹಲವಾರು ವಾಹನಗಳು ವಾಪಸ್ ಬಂದಿವೆ. ಹೀಗಾಗಿ, ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹಲವಾರು ಹಳ್ಳಿಗಳು ಹಾಗೂ ಉಭಯ ಪಟ್ಟಣಗಳ ನಡುವೆ ಸಂಪರ್ಕ ಬಂದ್ ಆಗಿದ್ದು, ಹಳ್ಳಿಗರು ಪರಿದಾಡುವಂತಾಗಿದೆ.
ಎರಡು ದಿನಗಳಿಂದ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಸೇತುವೆಯ ಎರಡೂ ಬದಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿರುವ ಕಾರಣ, ಹಲವು ಕಡೆ ಸೇತುವೆಗಳು, ಗುಡ್ಡಗಳು ಕುಸಿದಿವೆ. ಸುತ್ತಮುತ್ತ ವಾಸಿಸುವ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಎದುರಾಗಿದೆ. ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ.