ಚಾಲಕನ ಬೇಜವಾಬ್ದಾರಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ನಡೆದಿದೆ.
ವೆಂಕಟೇಶ್ವರ ಟ್ರಾಸ್ಪೋರ್ಟ್ ನ ಗೋಡೌನಲ್ಲಿ ಲಾರಿ ರಿವರ್ಸ್ ತೆಗೆಯುವಾಗ ಕಾಂಪೌಂಡ್ ಗೆ ಗುದ್ದಿದ ರಭಸಕ್ಕೆ ಕಾಂಪೌಂಡ್ ಹೊರಭಾಗದಲ್ಲಿ ಕುಳಿತ್ತಿದ್ದ ವ್ಯಕ್ತಿಯ ಮೇಲೆ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ, ಸಾವನ್ನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿ ಅದೇ ಜಾಗದಲ್ಲಿ ಕಳೆದ ಕೆಲ ದಿನಗಳಿಂದ ಭೀಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ. ವ್ಯಕ್ತಿಗೆ ಸಂಬಂಧಿಸಿದವರು ಇಲ್ಲದ ಕಾರಣ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭ್ರಷ್ಟಾಚಾರ ಆರೋಪ: ಶಾಸಕ ಟಿ.ಡಿ ರಾಜೇಗೌಡ, ಪತ್ನಿ, ಮಗನಿಗೆ ಲೋಕಾಯುಕ್ತರಿಂದ ಎಫ್‌ಐಆರ್ ದಾಖಲು
ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.