ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.
ಮಾಗಡಿ ಗ್ರಾಮದ ಕೆರೆ ಏರಿ ಸಮೀಪ, ಚಿಕ್ಕಮಗಳೂರು- ಬೇಲೂರು ರಸ್ತೆಯಲ್ಲಿ ಬರುತ್ತಿದ್ದ, KA12 B3769 ನಂಬರಿನ ಪ್ಯಾಸೆಂಜರ್ ಆಟೋರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ, ಅಂದಾಜು 50,000/- ರೂ ಬೆಲೆ ಬಾಳುವ 5 ಕೆಜಿ 143 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳ ವಿರುದ್ದ ಚಿಕ್ಕಮಗಳೂರು ಜಿಲ್ಲಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭಾರತ, ಪಾಕಿಸ್ತಾನ ವಿಭಜನೆ ಆಗದಿದ್ದರೆ ಬಿಜೆಪಿಯವರು ಉರ್ದು ಮಾತಾಡುತ್ತಿದ್ದರು; ಸಚಿವ ಸಂತೋಷ್ ಲಾಡ್
ಈ ವೇಳೆ ಡಾ.ವಿಕ್ರಮ್ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರು, ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶೈಲೆಂದ್ರ, ಸಚಿನ್ ಕುಮಾರ, ರಘುನಾಥ , ಎಸ್ ವಿ ಹಾಗೂ ಸಿಬ್ಬಂದಿಗಳಾದ ಲೋಹಿತ್, ಯುವರಾಜ, ಮಹೇಶ, ಸುನಿಲ್, ಕಿರಣ, ಶಶಿಧರ, ಶಿವರಾಜ ಹಾಗೂ ಇನ್ನಿತರರಿದ್ದರು.
