ಚಿಕ್ಕಮಗಳೂರು ಜಿಲ್ಲೆ, ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆತ್ತದಕೊಳಲು ಗ್ರಾಮದ ದೊಡ್ಡಬಿಳಾಲುವಿನಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ಗುರುವಾರ ನಡೆದಿದೆ.
ಗುರುವಾರ ರಾತ್ರಿ, ಸುಮಾರು 9 ಗಂಟೆಯ ವೇಳೆಯಲ್ಲಿ ಟಿಟಿ ವಾಹನದಲ್ಲಿ, ಸ್ಥಳೀಯ ಜನರು ಹೋಗುತ್ತಿರುವಾಗ ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಆಗ್ರಹ
ಗಾಡಿ ಚಲಾಯಿಸುವ ರಸ್ತೆ ಹೊಂಡ ಗುಂಡಿಗಳಿಂದ ಕೊಡಿದೆ. ಈ ಗ್ರಾಮದ ರಸ್ತೆಯಲ್ಲಿ ಚಲಿಸುವುದೇ ದೊಡ್ಡ ತಲೆನೋವಾಗಿದೆ ಗ್ರಾಮಸ್ಥರಿಗೆ. ಚಿರತೆ ಕಂಡಿರುವ ಕಾರಣ ಸವಾರರು ವಾಹನ ಚಲಾಯಿಸಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ, ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.