ಮನೆಯಲಿದ್ದ ಚಿನ್ನಭರಣಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪುರ ನಿವಾಸಿ ಸುರೇಶ ಎ (27), ಎಂಬಾತ ಆರೋಪಿ, ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿ 23.12.2019 ರಂದು ಮನೆಯೊಂದರ ಹಿಂಭಾಗದ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ತೆಗೆದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ 4 ಲಕ್ಷ ಬೆಲೆ ಬಾಳುವ 134 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಪ್ರಕರಣಕ್ಕೆ ಮೂಡಿಗೆರೆ ನ್ಯಾಯಾಲಯ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಳೆ ಅಬ್ಬರ: ಗುಡ್ಡ ಕುಸಿಯುವ ಆತಂಕ
ಈ ಕುರಿತು ಪ್ರಧಾನ ಸಹಾಯಕ ಸರ್ಕಾರಿ ಅಭಿಯೋಜಕರಾದ ರೂಪ ಟಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಾನಿಟರಿಂಗ್ ಶ್ರೀನಾಥ್ ರೆಡ್ಡಿ, ಪಿ.ಎಸ್.ಐ ಮೂಡಿಗೆರೆ ಪೊಲೀಸ್ ಠಾಣೆ, ಕೋರ್ಟ್ ಕರ್ತವ್ಯವನ್ನು ಸಂತೋಷ್ ಕುಮಾರ್ ಹೆಚ್. ಎಲ್ ಸಿ ಪಿ ಸಿ, ಜಗದೀಶ ಎಸ್ ಜಿ, ಸಿ ಹೆಚ್ ಸಿ, ಮಹೇಂದ್ರ, ಸಿ ಪಿ ಸಿ ಯವರು ಕಾರ್ಯ ನಿರ್ವಹಿಸಿದ್ದಾರೆ.
