ಮನೆಗಳ್ಳತನ ಪ್ರಕರಣದಲ್ಲಿ ಮೂವರು ನೇಪಾಳಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ಮತ್ತು ಹಣ ವಶ ಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
21ರಂದು ಬೆಳಗಿನ ಜಾವದಲ್ಲಿ ಕೊಪ್ಪ ತಾಲೂಕು ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್‌ನ ಮಾಲೀಕರ ಮನೆಯಲ್ಲಿ 6 ಲಕ್ಷ ನಗದು ಮತ್ತು 37,50,000/- ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ:45/2025 ಕಲಂ 331(4),305,306 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಕೆ.ಟಿ.ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ, ತಿಪ್ಪೇಸ್ವಾಮಿ ಪೊಲೀಸ್ ಉಪಾಧೀಕ್ಷಕರು ಸೆನ್ ಪೊಲೀಸ್ ಠಾಣೆ ಚಿಕ್ಕಮಗಳೂರು, ಶ್ರೀ ಖಾದರ್ ಪಿಎಸ್‌ಐ ಸೆನ್ ಠಾಣೆ. ಹರೀಶ್ ಸಿಪಿಸಿ. ರಮೇಶ ಸಿ.ಪಿ.ಸಿ ಮತ್ತು ಬಾಲಾಜಿಸಿಂಗ್ ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪವಿಭಾಗ, ಬಸವರಾಜ ಜಿ.ಕೆ. ಪಿ.ಎಸ್.ಐ. ಕೊಪ್ಪ ಪೊಲೀಸ್ ಠಾಣೆ ಹಾಗೂ ಹೆಚ್ ಸಿ ತಿಪ್ಪೇಶ, ಪಿ.ಸಿ ಯುವರಾಜ, ಪಿ.ಸಿ ಪ್ರಕಾಶ ಒಳಗೊಂಡ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಅಪರಾಧ ಪತ್ತೆ ಕಾರ್ಯದ ತನಿಖಾ ತಂಡಗಳಲ್ಲಿ ವೈಜ್ಞಾನಿಕವಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿ,ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 22ರಂದು ರಾತ್ರಿ 8 ಗಂಟೆ ಸಮಯದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ರಾಜೇಂದ್ರ ಶೇರ್ ಬಾಯ್ (30) ವರ್ಷ ವಾಸ ಧನಗೇಡಿ, ಏಕೇಂದ್ರ ಕುಟಲ್ ಬದ್ವಾಲ್ (31 )ವರ್ಷ ವಾಸ ಧನಗೇಡಿ, ಕರಂ ಸಿಂಗ್ ಬಹದ್ದೂರ್ ದಾಮಡಿ ಮೂವರು ನೇಪಾಳ ರಾಜ್ಯದವರು. ಅಂದಾಜು 1,50,00,000/- ಮೌಲ್ಯದ 1 ಕೆಜಿ 800 ಗ್ರಾಂ.ತೂಕದ ಚಿನ್ನ, 1 ಕೆಜಿ 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 25 ಲಕ್ಷ ಕಾರುಗಳನ್ನು ವಶಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಕುರಿತು ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆಯ ನೇತೃತ್ವದ ತಂಡಗಳಲ್ಲಿನ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹಳ್ಳ ದಾಟಲು ಹೋದ ಯುವಕ ನೀರು ಪಾಲು
ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮನವಿ:
1) ಸಾರ್ವಜನಿಕರು ಮನೆಯಲ್ಲಿ ಹೆಚ್ಚು ಚಿನ್ನಾಭರಣ ಮತ್ತು ನಗದನ್ನು ಇಡದೆ, ಬ್ಯಾಂಕ್ ಗಳಲ್ಲಿ ಇಡುವುದು ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಉತ್ತಮ.
2) ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸುವುದು.
3) ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳನ್ನು, ಹೊರರಾಜ್ಯ ಹೊರದೇಶದವರನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಪೂರ್ವಾಪರ, ಚರಿತ್ರೆ ವಿಚಾರಗಳನ್ನು ಪರಿಶೀಲಿಸಿಕೊಂಡು ಸದರಿ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡುವುದು.