ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಜೆ ಮೆಟ್ಟಿಲು ತೂಗು ಸೇತುವೆ ಬಳಿ ನಡೆದಿದೆ.
ಜಗದೀಶ್ (33) ಹಾಗೂ ಚೋಟಾ ಸಿಂಗ್ (28) ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಗಳು. ರಾಜಸ್ಥಾನದಿಂದ ಎರಡು ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದ 12 ಜನ ಸ್ನೇಹಿತರು ಕಳಸ ತಾಲೂಕಿನ ಸಂಜೆ ಮೆಟ್ಟಿಲು ಸೇತುವೆ ಬಳಿ ಈಜಲು ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಉರುಸ್ ಹಬ್ಬದಲ್ಲಿ ಅವ್ಯವಸ್ಥೆ; ಆಡಳಿತಾಧಿಕಾರಿಗಳ ನಿರ್ಲಕ್ಷ್ಯವೆಂದ ಜನರು
ಮೃತದೇಹಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದು, ಮಲ್ಪೆಯ ಮುಳುಗು ತಜ್ಞ ಭಾಸ್ಕರ್ ಅವರಿಂದ, ಜಗದೀಶ್ ಮೃತದೇಹ ಮಾತ್ರ ಪತ್ತೆಯಾಗಿದೆ. ಚೋಟಾ ಸಿಂಗ್ ಮೃತದೇಹ ಪತ್ತೆಯಾಗದ ಕಾರಣ ಶೋಧ ಕಾರ್ಯ ಮುಂದುವರಿಸಲಾಗಿದ್ದು, ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
