ವಾಟರ್ ಹೀಟರ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಗ್ರಾಮದಲ್ಲಿ ನಡೆದಿದೆ.
ಮೋಹನ್ (34) ಎಂಬಾತ ಮೃತ ದುರ್ದೈವಿ. ಅಮೃತಪುರ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮನೆಯಲ್ಲಿ ಕುಡಿಯಲು ನೀರು ಬಿಸಿ ಮಾಡಲು ಬಳಸುವ ವಾಟರ್ ಹಿಟರ್ ಸ್ಪರ್ಶಿಸಿ ಮೋಹನ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಗಣಿಗಾರಿಕೆ: ಸ್ಪೋಟಕ ವಶ ಪಡಿಸಿಕೊಂಡ ಅಧಿಕಾರಿಗಳು
ಈ ಪ್ರಕರಣ ಕುರಿತು ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.