ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ಮಾಡಿ ಹೊಟ್ಟೆ ಭಾಗಕ್ಕೆ ತಿವಿದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿರುವ ಸುಬ್ರಹ್ಮಣ್ಯ, ಎಂದಿನಂತೆ ಕಾಫಿ ತೋಟಕ್ಕೆ ಬೈಕಿನಲ್ಲಿ ತೆರಳುವಾಗ ಏಕಾಏಕಿ ಕಾಡಾನೆ ಬೈಕಿಗೆ ಅಡ್ಡ ಬಂದಿದೆ. ಬೈಕಿನಲಿದ್ದರಿಂದ ನಿಯಂತ್ರಣ ಕಳೆದುಕೊಂಡ ಸುಬ್ರಹ್ಮಣ್ಯ ಆನೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆನೆ ಸುಬ್ರಹ್ಮಣ್ಯ ಅವರ ಮೇಲೆ ಎರಗಿ, ಹೊಟ್ಟೆ ಭಾಗಕ್ಕೆ ತಿವಿದಿದೆ. ಸುಬ್ರಹ್ಮಣ್ಯ ಜೋರಾಗಿ ಚೀರಾಡಿದ್ದರಿಂದ ಆನೆ ಸ್ಥಳದಿಂದ ಓಡಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಭಾರೀ ಮಳೆ; ಒಂದೇ ಸ್ಥಳದಲ್ಲಿ ಎರಡು ಕಾರುಗಳು ಪಲ್ಟಿ
ಸ್ಥಳೀಯರು ಸ್ಥಳಕ್ಕೆ ಬಂದು ಗಾಯಾಳು ಸುಬ್ರಹ್ಮಣ್ಯ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಮಲ್ಲಂದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.