ಚಿಕ್ಕಮಗಳೂರು | ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡುವುದನ್ನು ಖಂಡಿಸಿ ಪ್ರತಿಭಟನೆ

Date:

Advertisements

ಶಾಲೆಗಳು ತೆರೆಯಬೇಕಾದ ಸ್ಥಳಗಳಲ್ಲಿ ನಮ್ಮನಾಳುವ ಸರ್ಕಾರವೇ ಸಾರಾಯಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಇದರಿಂದ ನಮ್ಮ ಸಂಸಾರ ಹಾಳಾಗುತ್ತಿವೆ ಎಂದು ಸಾರಾಯಿ ವಿರೋಧಿ ಹೋರಾಟ ಸಮಿತಿಯ ಮಹಿಳೆಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

1,000 ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ನಡೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಲಗಂಡಿ ಗ್ರಾಮದ ಮಹಿಳೆಯರು ಅ.19ರಂದು ಪ್ರತಿಭಟನೆ ನಡೆಸಿದ್ದಾರೆ.

“ಸಮೃದ್ಧವಾದ ಮಲೆನಾಡು ಮುಂದೆ ಮಧ್ಯವ್ಯಸನಿಗಳ ಬೀಡಾಗುತ್ತದೆ ಎಂಬ ಆತಂಕ ಇದೆ. ಗ್ರಾಮೀಣ ಬಾಗಗಳಲ್ಲಿ ಸರ್ಕಾರ ಶಾಲೆಗಳನ್ನು ತೆರೆಯಲು ಚಿಂತಿಸಬೇಕೆ ಹೊರತು, ಸಾರಾಯಿ ಅಂಗಡಿ ತೆಗೆಯುವುದನಲ್ಲ. ಇದರಿಂದ ನಮ್ಮ ಮನೆಗಳು ಹಾಳಾಗುತ್ತವೆ” ಎಂದು ಆಕ್ರೊಶ ವ್ಯಕ್ತಪಡಿಸಿದರು.

Advertisements

“ಮಲೆನಾಡಿನ ಸುಂದರ ಈ ಸುಂದರ ಪರಿಸರದಲ್ಲಿ ಹಳ್ಳಿಯ ಜನರಿಗೆ ಬೇಕಾದ ಮೂಲ ಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಮನೆಗಳಿಗೆ ಹಕ್ಕು ಪತ್ರ, ಸಾಗುವಳಿ ಜಮೀನಿಗೆ ಹಕ್ಕುಪತ್ರ, ಗ್ರಂಥಾಲಯಗಳು, ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ತೆರೆಯುವ ಬಗ್ಗೆ ಯೋಜನೆ ರೂಪಿಸಬೇಕು. ಅದನ್ನು ಬಿಟ್ಟು ಇಂತಹ ಸಾರಾಯಿ ಅಂಗಡಿಗಳನ್ನು ತೆರೆಯುವುದರಿಂದ ಯುವಕರು ಮಧ್ಯಪಾನಕಕ್ಕೆ ತುತ್ತಾಗಿ ಜೀವನವನ್ನು ರೂಪಿಸಿಕ್ಕೊಳ್ಳಬೇಕಾದ ಸಮಯದಲ್ಲಿ ತಮ್ಮ ಜೀವನವನ್ನೇ ಅಂತ್ಯಗೊಳಿಸುತ್ತಿದ್ದಾರೆ. ಹಲವು ಜನ ಮಾನಸಿಕ ಅಶ್ವಸ್ಥರಾಗತೊಡಗಿದ್ದಾರೆ” ಎಂದು ಹೇಳಿದರು.

“ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎನ್ನುತ್ತ ದಿನಸಿ ಅಂಗಡಿಗಳಲ್ಲಿ, ಮನೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಜನರನ್ನು ಮದ್ಯ ವ್ಯಸನಿಗಳಾಗುವಂತೆ ಪ್ರೇರೆಪಿಸುತ್ತಿದೆ. ಊರಿನ ಜನರ ಮಧ್ಯೆ ದ್ವೇಷದ ವಾತಾವರಣ ಸೃಷ್ಟಿಸುತ್ತಿದೆ. ಇದರಿಂದ ಮನೆ, ಮನಸ್ಸು, ಊರು ಎಲ್ಲವೂ ಕೂಡ ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ದುಡಿಯುವ ಜನರು ತಮ್ಮ ಆರೋಗ್ಯವನ್ನು ಹದಗೆಡಿಸಿಕ್ಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

“ಹಳ್ಳಿಗಳಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಹಾಗೂ ಅಕ್ರಮ ಮತ್ತು ಸಕ್ರಮ ಯಾವುದೇ ರೀತಿಯಿಂದಲೂ ಮದ್ಯ ಮಾರಾಟ ಮಾಡಬಾರದು. ಹೊಸದಾಗಿ ಎಮ್ಎಸ್ಐಎಲ್(MSIL)ಗಳಿಗೆ ಅನುಮತಿ ನೀಡಬಾರದು. ಇದರಿಂದ ಸರ್ಕಾರ ದುಡಿಯುವ ಜನರ ಪರವಾಗಿದೆ ಎಂದು ಸಾಬೀತು ಪಡಿಸಬೇಕಿದೆ” ಎಂದು ಒತ್ತಾಯಿಸಿದರು.

“ಯುವಜನತೆ ಮದ್ಯಪಾನದತ್ತ ಮುಖಮಾಡದೆ, ನಿಮ್ಮ ನಿಮ್ಮ ತಂದೆ, ತಾಯಿ ಅವರು ಮಾಡಿಟ್ಟ ಅಷ್ಟೋ ಇಷ್ಟೋ ಇರುವ ಜಮೀನನ್ನು ಉಳಿಸಿಕೊಂಡು ಅದರ ಉಳಿವಿಗಾಗಿ ಸರ್ಕಾರದ ಜನವಿರೋಧಿ ಕಾಯ್ದೆ, ಕಾನೂನುಗಳ ವಿರುದ್ಧ ಹೋರಾಡುತ್ತಾ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕಿದೆ. ನಮ್ಮ ಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮವಿರಲಿ, ಸಕ್ರಮವಿರಲಿ ಮದ್ಯ ಮಾರಾಟಕ್ಕೆ ಒಕ್ಕೊರಲ ವಿರೋಧವಿದೆ” ಎಂದರು.

ಪ್ರತಿಭಟನಾ ವಿಷಯ ತಿಳಿದ ತಾಲೂಕಿನ ತಹಶೀಲ್ದಾರ್ ,ಅಬಕಾರಿ ಇಲಾಖೆಯ ಅಧಿಕಾರಿಗಳು ,ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ, ಜನರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಪ್ರಜ್ಞಾವಂತ ನಾಗರಿಕರು, ರೈತಕಾರ್ಮಿಕರು, ಮಹಿಳೆಯರು, ದಲಿತ ಆದಿವಾಸಿಗಳು, ವಿದ್ಯಾರ್ಥಿ ಯುವ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X