ಕೃಷಿ ಹೊಂಡಕ್ಕೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಅಗಳ ಗ್ರಾಮದ ಬಿಳಿಗಿರಿ ಎಸ್ಟೇಟ್‌ನಲ್ಲಿ ನಿನ್ನೆ ನಡೆದಿದೆ.
ರಂಜಿತಾ (20) ಮೃತ ಯುವತಿ. ಕೃಷಿ ಹೊಂಡದಲ್ಲಿ ಮುಳುಗಿದ್ದ ರಂಜಿತಾ ಮೃತದೇಹವನ್ನು ಹಾಂದಿ ಹೆಸಗಲ್ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮುಳುಗು ತಜ್ಞ ರಾಕೇಶ್, ಅಭಿಲಾಶ್ ಅವರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಪಘಾತ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಕರವೇ ಮನವಿ
ರಂಜಿತಾಳ ಸಾವಿಗೆ ಕಾರಣ ತಿಳಿಯದೆ ಮೃತ ಯುವತಿಯ ತಂದೆ ಶೇಖರ್ ನಾಯಕ್ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
