ಜುಲೈ 27, 2025ರಂದು ಚಿತ್ರದುರ್ಗದ ಪಿಳ್ಳೇಕಾರನ ಹಳ್ಳಿಯ ಬಾಪೂಜಿ ಸಮೂಹ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮದಲ್ಲಿ ದಾವಣಗೆರೆ ಸೇರಿದಂತೆ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಎಲ್ಲ ತಾಲೂಕುಗಳಿಂದ ತಲಾ ಒಬ್ಬರು ಕವಿ ಮತ್ತು ಕವಯತ್ರಿಯರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, “ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರೊಂದಿಗೆ ಚರ್ಚಿಸಿ ಪ್ರತೀ ತಾಲೂಕಿನಿಂದ ತಲಾ ಒಬ್ಬರು ಕವಿ, ಒಬ್ಬರು ಕವಯಿತ್ರಿ ಸೇರಿದಂತೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ದಾವಣಗೆರೆ ತಾಲೂಕಿನಿಂದ ಸನಾವುಲ್ಲಾ ನವಿಲೇಹಾಳ್ ಮತ್ತು ಸೌಮ್ಯಾ ದಯಾನಂದ್, ಹರಿಹರ ತಾಲೂಕಿನಿಂದ ಕುಂದೂರು ಮಂಜಪ್ಪ ಮತ್ತು ರಾಧಾ ಹನುಮಂತಪ್ಪ ಟಿ, ಚನ್ನಗಿರಿ ತಾಲೂಕಿನಿಂದ ಶರತ್ ಹೆಚ್.ಎಸ್. ಸಂತೆಬೆನ್ನೂರು ಮತ್ತು ಕನಕ ಯು ಆರ್ ಹಿರೇಕೊಗಲೂರು, ಹೊನ್ನಾಳಿ ತಾಲೂಕಿನಿಂದ ಕಡದಕಟ್ಟೆ ತಿಮ್ಮಪ್ಪ ಮತ್ತು ಕವಿತಾ ನಾಯಕ್, ಜಗಳೂರು ತಾಲೂಕಿನಿಂದ ಎಸ್.ವಿ.ಶಾಂತಕುಮಾರ್ ಮತ್ತು ಕೆ.ಸುಜಾತಮ್ಮ ರಾಜು, ನ್ಯಾಮತಿ ತಾಲೂಕಿನಿಂದ ಜಿ.ನಿಜಲಿಂಗಪ್ಪ ಮತ್ತು ಬಿ.ಜಿ.ಚೈತ್ರ ತಿಪ್ಪೇಸ್ವಾಮಿ ಇವರುಗಳು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.

“ಮದ್ಯ ಕರ್ನಾಟಕ-ಕಾವ್ಯ ಸಂಭ್ರಮದಲ್ಲಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಯುವಜನತೆ, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶಿಷ್ಟವಾದ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ” ವಿನಂತಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ವೀರೇಶ್ ಕೆ ಎಂ, ಚಿತ್ರದುರ್ಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ, ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಭಾಗವಹಿಸಲಿದ್ದು, ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಕರಿಯಪ್ಪ ಮಾಳಿಗೆ, ಕಾವ್ಯ ಸಂಭ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪುಷ್ಪ ಭಾರತಿ ಉದ್ಘಾಟಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಯೂರಿಯಾ ರಸಗೊಬ್ಬರ ಅಭಾವ; ರೈತರ ಬೆಳೆಗಳಿಗೆ ಅಗತ್ಯ ಗೊಬ್ಬರ ಒದಗಿಸಲು ರೈತ ಸಂಘ ಆಗ್ರಹ
ಕಾರ್ಯಕ್ರಮದಲ್ಲಿ ಸುನಿತಾ ಕಿರಣ್, ವಿ. ಧನಂಜಯ, ಹುರಳಿ ಬಸವರಾಜ್, ಸಿ. ಲೋಕೇಶ, ಶ್ರೀನಿವಾಸ್ ಮಳಲಿ, ಸೇರಿದಂತೆ ಕವಿಗಳಾದ ಚಿತ್ರದುರ್ಗ ತಾಲೂಕಿನ ಮೀರಾ ನಾಡಿಗ್, ನಿರ್ಮಲ ಭಾರಧ್ವಜ್, ಶೃತಿ ಎಸ್. ಹೆಗಡೆ, ಹೊಳಲ್ಕೆರೆ ತಾಲೂಕಿನ ಚಂದ್ರಶೇಖರ, ಸಿದ್ದವ್ವನಹಳ್ಳಿ ವೀರೇಶ್, ಹೊಸದುರ್ಗ ತಾಲೂಕಿನ ನಳಿನ, ಧನಂಜಯ ಮೆಂಗಸಂದ್ರ, ಹಿರಿಯೂರು ತಾಲೂಕಿನ ಶಿವಾನಂದ, ಚಳ್ಳಕೆರೆ ತಾಲೂಕಿನ ಜೆ.ಸಿ. ಶಿವಣ್ಣ, ರಂಗಸ್ವಾಮಿ ಎಸ್.ಆರ್, ಅಜ್ಜಂಪುರದ ತಾಲೂಕಿನ ಡಾ. ಯಶೋಧಮ್ಮ ಕರಿಯಪ್ಪ , ದೀಪಕ್ ನಿಡಘಟ್ಟ, ಕಳಸ ತಾಲೂಕಿನ ಪ್ರೇಮ್ ಕುಮಾರ್, ಗೀತಾ ಮಕ್ಕಿಮನೆ, ಸಂಧ್ಯಾಗಿರಿ ಶ್ರೀ, ಚಿಕ್ಕಮಗಳೂರು ತಾಲೂಕಿನ ಸೌಭಾಗ್ಯ ಮಹಾಂತೇಶ, ಶೃಂಗೇರಿ ತಾಲೂಕಿನ ಸುನಿತಾ ನವೀನ್ ಗೌಡ ಮಹಾರುದ್ರಪ್ಪ ಚ. ಚಿಕ್ಕಮ್ಮ, ತರೀಕೆರೆ ತಾಲೂಕಿನ ಡಾ. ನಾಗಜ್ಯೋತಿ, ರವಿ ದಳವಾಯಿ, ನವೀನ್ ಪೆನ್ನಯ್ಯ , ತ.ಮ. ದೇವಾನಂದ, ಸುನಿತಾ ಕಿರಣ್, ಉಮಾ ಪ್ರಕಾಶ್, ಕಡೂರು ತಾಲೂಕಿನ ಕುಪ್ಪಾಳು ಶಾಂತಮೂರ್ತಿ, ಪಿ.ಎಸ್. ಉಮಾದೇವಿ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.