ಚಿಕ್ಕಮಗಳೂರು | ನಕಲಿ ಐಎಎಸ್ ಅಧಿಕಾರಿ: ₹41 ಲಕ್ಷ ವಂಚನೆ; ಆರೋಪಿ ಬಂಧನ 

Date:

ನಾನು ಐಎಎಸ್ ಅಧಿಕಾರಿ ಔಷಧ ಸರಬರಾಜು ಮಾಡುವ ಗುತ್ತಿಗೆ ಕೊಡಿಸುತ್ತೇನೆಂದು ನಂಬಿಸಿ ಔಷಧ ಅಂಗಡಿ ಮಾಲೀಕನಿಗೆ ₹41 ಲಕ್ಷ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ನಕಲಿ ಐಎಎಸ್ ಅಧಿಕಾರಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಕಡೂರು ತಾಲ್ಲೂಕಿನ ಚಿಕ್ಕಬಳ್ಳೇಕೆರೆ ಗ್ರಾಮದವನು ಎಂದು ಹೇಳಿಕೊಂಡಿದ್ದ ಮಿಥುನ್, ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಕೆಲಸ ಮಾಡುತ್ತಿದ್ದೇನೆ, ಚಿಕ್ಕಮಗಳೂರು ಜಿಲ್ಲೆಯ ಆರೋಗ್ಯ ಇಲಾಖೆಯ ಉಸ್ತುವಾರಿ ಕೂಡ ಹೊಂದಿದ್ದೇನೆ’ ಎಂದು ನಂಬಿಸಿದ್ದ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಸೇರಿ ಎಲ್ಲರೂ ಇದನ್ನು ನಂಬಿದ್ದರು. ಔಷಧ ಅಂಗಡಿ ನಡೆಸುವ ಸತೀಶ್ ಜಿ.ಆರ್. ಎಂಬುವರು ಪೊಲೀಸರಿಗೆ ದೂರು ನೀಡಿದ ಬಳಿಕ ಆತ ನಕಲಿ ಅಧಿಕಾರಿ ಎಂದು ಸಾಭಿತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

‘ಔಷಧ ಅಂಗಡಿಯ ಹಿಂಭಾಗದಲ್ಲಿರುವ ಶ್ರೇಯಸ್ ಕ್ಲಿನಿಕ್‌ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಚಂದ್ರಶೇಖರ್ ಜತೆ ಆಗಾಗ ಮಿಥುನ್ ಬರುತ್ತಿದ್ದ. ಐಎಎಸ್ ಅಧಿಕಾರಿ ಎಂದು ಚಂದ್ರಶೇಖರ್ ಅವರೇ ಪರಿಚಯ ಮಾಡಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಇಡೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಲು ಆದೇಶ ಕೊಡಿಸುತ್ತಾರೆ ಎಂದು ಚಂದ್ರಶೇಖರ್ ಹೇಳಿದ್ದರು’ ಎಂದು ಸತೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘₹1.8 ಕೋಟಿ ಮೊತ್ತದ ಔಷಧ ಸರಬರಾಜು ಆದೇಶ ಕೊಡಿಸಲಾಗುವುದು, ಶೇ 20ರಷ್ಟು ಕಮಿಷನ್ ನೀಡಬೇಕು’ ಎಂದು ಮಿಥುನ್ ಕೇಳಿದ್ದ. ಅದರಂತೆ ಚಂದ್ರಶೇಖರ್ ಸಮ್ಮುಖದಲ್ಲೇ ಬೆಂಗಳೂರಿನ ಜಕ್ಕೂರು ಏರೋಡ್ರಮ್ ಪಕ್ಕದ ರಸ್ತೆಯಲ್ಲಿ 2026ರ ಜ.18ರಂದು ಹಣ ನೀಡಿದ್ದೇನೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ‘ಎರಡು ವಾರಗಳಾದರೂ ಯಾವುದೇ ಆದೇಶ ಕೊಡಿಸದ ಕಾರಣ ಮತ್ತೆ ಸಂಪರ್ಕ ಮಾಡಿ ಕೇಳಿದಾಗ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅದನ್ನೂ ಮಿಥುನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದೇನೆ. ಇನ್ನೂ 2- 3 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದ. ಬಳಿಕ ಆರೋಗ್ಯ ಇಲಾಖೆಯಲ್ಲಿ ಇರುವ ಪರಿಚಯಸ್ಥರನ್ನು ವಿಚಾರಿಸಿದಾಗ ಮಿಥುನ್ ಹೆಸರಿನ ಐಎಎಸ್ ಅಧಿಕಾರಿ ಇಲ್ಲ ಎಂಬುದು ಗೊತ್ತಾಯಿತು. ನನಗೆ ವಂಚನೆ ಮಾಡಿರುವ ಮಿಥುನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸತೀಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅಂಬೇಡ್ಕರ್ ಜಯಂತಿ: ಕಾರು ಹರಿದು ಸ್ಥಳದಲ್ಲೇ ಬಾಲಕಿ ಸಾವು 

ಈ ಕುರಿತು ಗುರುವಾರ ಪತ್ರಿಕಾ ಗೋಷ್ಠಿ ನಡೆಸಿದ ನಗರದ ಲಿಸಾ ಫೌಂಡೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್, ‘ಈ ಪ್ರಕರಣದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಚಂದ್ರಶೇಖರ್ ಅವರ ಕೈವಾಡವೂ ಇದೆ. ಆದ್ದರಿಂದ ಅವರನ್ನೂ ಎ-2 ಆರೋಪಿಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಮತ ಯಾಚನೆ

ಮುಂಬರುವ ಜಿ.ಪಂ,‌ ತಾ.ಪಂ. ಗ್ರಾ.ಪಂ.ಗೆ ಈ ಚುನಾವಣೆಯೇ ಪ್ರಮುಖ ದಾರಿ. ನಂತರ...

ಯುವಜನತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಬೇಕು: ಹಜ್ರತ್ ಎಂ.ಪಿ. ಮುಜಮ್ಮಿಲ್ ಸಾಹೇಬ್ ಕರೆ

ಮೈಸೂರಿನ ಗೌಸಿಯಾ ನಗರದ ಉಸ್ಮಾನಿಯಾ ಬ್ಲಾಕ್‌ನ ನೌಜವಾನ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ...

ಸೇನಾ ನೇಮಕಾತಿ ಆಯ್ಕೆ ಪ್ರಕ್ರಿಯೆ ಕುರಿತು ಅರಿವು; ಪೂರ್ವಭಾವಿ ಪರೀಕ್ಷೆ

ಭಾರತೀಯ ಸೇನೆಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ನೇಮಕಾತಿ...

ವಿಜಯಪುರ | ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಿ: ಎಸ್.ಎಂ ಪಾಟೀಲ ಗಣಿಹಾರ

ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ...