ಕೇಂದ್ರ ಸರ್ಕಾರದ ಅವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಮೊದಲ ಹಂತದಲ್ಲಿ ಕಡೂರು ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಬೇಕಿತ್ತು. ಆದರೆ ಲೆಕ್ಕಾಚಾರದ ನಿಯಮಗಳಿಂದಾಗಿ ಅದು ಕೈತಪ್ಪಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಮಳೆಯಿಲ್ಲದೆ ಕಂಗಾಲಾಗಿರುವ ಬರಪೀಡಿತ ಪ್ರದೇಶಗಳಿಗೆ ಅನ್ಯಾಯವಾಗುತ್ತಿದ್ದು, ಈ ಮಾನದಂಡಗಳನ್ನು ತಕ್ಷಣವೇ ಪರಿಷ್ಕರಿಸಬೇಕಾಗಿದೆ. ಮುಂದಿನ ವಾರ ರಾಜ್ಯ ಸರ್ಕಾರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಿದ್ದು, ಅದರಲ್ಲಿ ಕಡೂರು ತಾಲೂಕು ನೂರಕ್ಕೆ ನೂರರಷ್ಟು ಸೇರ್ಪಡೆಯಾಗಲಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಇಡೀ ತಾಲೂಕನ್ನು ಒಂದೇ ಘಟಕವಾಗಿ ಪರಿಗಣಿಸುವ ಪದ್ಧತಿಯಿಂದಾಗಿ ಮಲೆನಾಡು ಹಾಗೂ ಅರೆಮಲೆನಾಡು ಭಾಗದ ಜನರಿಗೆ ತೀವ್ರ ಅನ್ಯಾಯವಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಆವತಿ, ವಸ್ತಾರೆ, ಜಾಗರದಂತಹ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾದರೂ, ಕಸಬಾ ಹಾಗೂ ಲಕ್ಯಾ ಹೋಬಳಿಗಳಲ್ಲಿ ಭೀಕರ ಬರಗಾಲವಿದೆ. ಅದರಲ್ಲೂ ಲಕ್ಯಾ ಹೋಬಳಿಯು ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಬರಪೀಡಿತಗೊಂಡಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ; ಶಾಸಕಿ ನಯನ ಮೋಟಮ್ಮ
ಮಳೆಯಾದರೂ, ಕಸಬಾ ಹಾಗೂ ಲಕ್ಯಾ ಹೋಬಳಿಗಳಲ್ಲಿ ಭೀಕರ ಬರಗಾಲವಿದೆ. ಅದರಲ್ಲೂ ಲಕ್ಯಾ ಹೋಬಳಿಯು ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಬರಪೀಡಿತ ಪ್ರದೇಶವಾಗಿದೆ. ಆದರೆ ಸಮಗ್ರ ತಾಲೂಕಿನ ಸರಾಸರಿ ಮಳೆ ಲೆಕ್ಕಕ್ಕೆ ಬರುವುದರಿಂದ ಬರ ಘೋಷಣೆಯ ಮಾನದಂಡಕ್ಕೆ ಸಿಗುತ್ತಿಲ್ಲ. ಈ ಹಿಂದೆ 2023ರಲ್ಲಿ ರಾಜ್ಯದ 202ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗಲೂ ನಮ್ಮ ತಾಲೂಕು ಪಟ್ಟಿಯಿಂದ ಹೊರಗುಳಿದಿತ್ತು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಬೇಸರ ವ್ಯಕ್ತಪಡಿಸಿದರು.





