ಚಿಕ್ಕಮಗಳೂರು | ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಮತಗಳ ಮರುಎಣಿಕೆ!

Date:

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮೇ 2ರಂದು ಅಂಚೆ ಮತಗಳ ಮರು ಎಣಿಕೆ ನಡೆಯಲಿದೆ. ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

- Advertisement -

ಮೇ 2ರಂದು ಬೆಳಿಗ್ಗೆ 8 ಗಂಟೆಗೆ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ ಶುರುವಾಗುತ್ತದೆ. ಚುನಾವಣಾಧಿಕಾರಿ ಗೌರವಶೆಟ್ಟಿ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದ್ದು, ಅವರಿಗೆ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಜೀವರಾಜ್ ವಿರುದ್ಧ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಒಟ್ಟು 2,811 ಅಂಚೆ ಮತಗಳ ಪೈಕಿ 279 ಮತಗಳನ್ನು ತಿರಸ್ಕರಿಸಲಾಗಿತ್ತು. ಈ ತಿರಸ್ಕೃತ ಮತಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಪ್ರಿಲ್ 6ರಂದು ಮರುಎಣಿಕೆಗೆ ಸೂಚನೆ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಬಸವಣ್ಣ ಸಮಾನತೆ ದಾರಿ ತೋರಿದ ಮಹಾನ್ ಮಾನವತಾವಾದಿ: ಶಾಸಕ ತಮ್ಮಯ್ಯ

ಈ ಮರುಎಣಿಕೆ ಪ್ರಕ್ರಿಯೆಯು ಒಂದೇ ಟೇಬಲ್‌ನಲ್ಲಿ ನಡೆಯಲಿದ್ದು, ಪಾರದರ್ಶಕತೆಗಾಗಿ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಎಣಿಕೆಯ ಸಂದರ್ಭದಲ್ಲಿ ಶಾಸಕ ರಾಜೇಗೌಡ ಹಾಗೂ ಮಾಜಿ ಶಾಸಕ ಜೀವರಾಜ್ ಅವರ ಏಜೆಂಟರು ಹಾಜರಿರಲಿದ್ದಾರೆ. ಆಕ್ಷೇಪ ಸಲ್ಲಿಸಲು ನೀಡಿದ್ದ ಗಡುವು ಏಪ್ರಿಲ್ 20ಕ್ಕೆ ಅಂತ್ಯಗೊಂಡಿದೆ. ಈ ಕುರಿತು ಇಡೀ ರಾಜ್ಯದ ಗಮನ ಮರು ಎಣಿಕೆಯ ಫಲಿತಾಂಶ ಕಡೆ ಇದೆ

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ; ತೆರಿಗೆ ಸೋರಿಕೆ ಆರೋಪ!

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ...

ಬಾದಾಮಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಚದುರಂಗ ಪಂದ್ಯಾವಳಿಗೆ ಚಾಲನೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು...

ಬಾಗಲಕೋಟೆ | ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ಕಾಶಪ್ಪನವರ ತಿರುಗೇಟು; ಯತ್ನಾಳರ ‘ಜೆಸಿಬಿ’ ಬಗ್ಗೆಯೂ ವ್ಯಂಗ್ಯ!

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ...

ರಾಜಕೀಯ ಬದಲಾವಣೆಗೆ ಜನಾಭಿಪ್ರಾಯದ ಸಂಘಟನೆ ಅಗತ್ಯ: ಜಾಗೃತ ಕರ್ನಾಟಕದ ರಾಜ್ಯ ಪ್ರವಾಸ ಆರಂಭ

ರಾಜಕೀಯವನ್ನು ದೂರವಿಡುವುದಲ್ಲ, ಜನಪರ ರಾಜಕಾರಣವನ್ನು ರೂಪಿಸುವುದೇ ಗುರಿ; ಸಾಮಾಜಿಕ ನ್ಯಾಯ, ಕೋಮು...