ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಿಂದ ಕೃತಿಕಾ ಕೆ. ಆರ್ ಅವರಿಗೆ ಪಿಎಚ್.ಡಿ ಪದವಿ ಘೋಷಣೆ.
ಪ್ರಾಧ್ಯಾಪಕ ಡಾ. ಯರ್ರಿಸ್ವಾಮಿ ಈ. ಅವರ ಮಾರ್ಗದರ್ಶನದಲ್ಲಿ “ಕಾಫಿ ತೋಟದಲ್ಲಿನ ಮಹಿಳಾ ಕಾರ್ಮಿಕರು: ಬದುಕು ಮತ್ತು ಬವಣೆ” ಎಂಬ ವಿಷಯದ ಮಹಾಪ್ರಬಂಧವನ್ನು ಮಂಡಿಸಿದ ಕೃತಿಕಾ ಕೆ.ಆರ್. ಅವರಿಗೆ ಭಾಷಾ ನಿಖಾಯದ ಡೀನ್ ಡಾ. ಎಫ್.ಟಿ. ಹಳ್ಳಿಕೇರಿ ಪಿಎಚ್.ಡಿ. ಪದವಿಯನ್ನು ಘೋಷಣೆ ಮಾಡಿದರು.
ನಿನ್ನೆ ನಡೆದ ಮೌಖಿಕ ಪರೀಕ್ಷೆಯ ಸಭೆಯಲ್ಲಿ ಮಾರ್ಗದರ್ಶಕರಾದ ಡಾ. ಯರ್ರಿಸ್ವಾಮಿ ಈ. ಆಂತರಿಕ ವಿಷಯ ತಜ್ಞರಾದ ಸಿ. ವೆಂಕಟೇಶ್, ಬಾಹ್ಯ ಮೌಲ್ಯಮಾಪಕರ ಡಾ. ಸುನೀತಾ ವಿ ಗಾಣಿಗೇರ, ವಿಭಾಗದ ಮುಖ್ಯಸ್ಥರಾದ ಡಾ. ಶೈಲಜಾ ಹಿರೇಮಠ, ಪ್ರಾಧ್ಯಾಪಕರಾದ ಡಾ. ಶಿವಾನಂದ ವಿರಕ್ತಮಠ ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಗೌರಿಬಿದನೂರು | ನಾಳೆ ಡಾ.ಎಚ್.ನರಸಿಂಹಯ್ಯ ಜನ್ಮಶತಮಾನೋತ್ಸವ; ಸಿಎಂ ಸಿದ್ದರಾಮಯ್ಯ ಚಾಲನೆ
ಚಿಕ್ಕಮಗಳೂರು ಜಿಲ್ಲೆ ಕಬ್ಬಿನಹಳ್ಳಿಯ ಧರಗುಣಿ ಗ್ರಾಮದ ರಮೇಶ್ ಕೆ.ಎನ್. ಮತ್ತು ರೇಣುಕಾ ಎಂ.ಕೆ. ದಂಪತಿಗಳ ಮಗಳಾದ ಕೃತಿಕಾ ಕೆ.ಆರ್. ಅವರಿಗೆ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಯನ್ನು ಪ್ರಧಾನ ಮಾಡಿದ್ದು, ತಂದೆ ತಾಯಿ ಹರ್ಷವ್ಯಕ್ತಪಡಿಸಿದ್ದಾರೆ.
