ಮದುವೆಯೊಂದರ ವಿಡಿಯೋ ಚಿತ್ರೀಕರಣ ಮಾಡುವ ವೇಳೆ ಡ್ರೋಣ್ ಕ್ಯಾಮೆರಾದ ಕಣ್ಣಿಗೆ ಎರಡು ಚಿರತೆಗಳು ಸೆರೆ ಸಿಕ್ಕಿವೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಬಳಿಕ ಶಿವಗಿರಿಬೆಟ್ಟದ ಸಮೀಪ ಚಿರತೆಗಳು ಕ್ಯಾಮೆರಾಗೆ ಕಾಣಿಸಿಕೊಂಡಿವೆ.
ಶಿವಗಿರಿಬೆಟ್ಟದ ದೇವಸ್ಥಾನದಲ್ಲಿ ಜೋಡಿಯೊಂದರ ವಿವಾಹ ನಡೆಯುತ್ತಿತ್ತು. ವಿವಾಹದ ಸಂದರ್ಭಗಳನ್ನು ಡ್ರೋಣ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ, ಕ್ಯಾಮೆರಾದಲ್ಲಿ ಚಿರತೆಗಳ ಕಾಣಿಸಿಕೊಂಡಿವೆ. ಮದುವೆ ಹಾಲ್‌ನಲ್ಲಿ ಹಾಕಲಾಗಿದ್ದ ಪರದೆ ಮೇಲೆ ಚಿರತೆಗಳ ವಿಡಿಯೋ ಕಾಣಿಸಿಕೊಂಡಿದ್ದು, ಕ್ಯಾಮೆರಾಮನ್ ಮತ್ತು ವಿವಾಹದಲ್ಲಿ ಭಾಗಿಯಾಗಿದ್ದವರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬೆಟ್ಟದ ಬಯಲಿನಲ್ಲಿ ಚಿರತೆಗಳು ಇರುವುದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ತಮ್ಮ ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಚಿರತೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.