ಮೂಡಿಗೆರೆ ಪಟ್ಟಣದಲ್ಲಿ ಅನಾಥವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಾಮಾಜಿಕ ಕಾರ್ಯಕರ್ತರ ತಂಡವೊಂದು ಅರೈಕೆ ಮಾಡಿ ಅನಾಥಾಶ್ರಮಕ್ಕೆ ಸೇರಿಸಿದೆ.
ಆಂಧ್ರಪ್ರದೇಶದ ಮಲ್ಲೇಶ ಎಂಬುವವರು ಹಲವಾರು ದಿನಗಳಲ್ಲಿ ಮೂಡಿಗೆರೆಯಲ್ಲಿ ನಿರ್ಗತಿಕರಂತೆ ತಿರುಗಾಡುತ್ತಿದ್ದರು. ಅವರನ್ನು ಗಮನಿಸಿದ ಕಾಫಿನಾಡು ಸಮಾಜ ಸೇವಕರು, ಅವರನ್ನು ಸ್ವಚ್ಚಗೊಳಿಸಿ, ಆಹಾರ ನೀಡಿ ಉಪಚರಿಸಿದ್ದಾರೆ. ನಂತರ, ತುಮಕೂರು ಬಳಿಯ ಶಾರದಾಂಭ ಟ್ರಸ್ಟ್ ಆನಾಥಶ್ರಮಕ್ಕೆ ಸೇರಿಸಿದ್ದಾರೆ.
ಮಲ್ಲೇಶ ಅವರನ್ನು ಆಶ್ರಮಕ್ಕೆ ಸೇರಿಸುವ ವೇಳೆ ಕಾಫಿನಾಡು ಸಮಾಜಸೇವಕ ಹಸೈನಾರ್ ಬಿಳಗುಳ, ಮುಸ್ತಾಕ್ ಬಿಳಗುಳ, ಆಟೋ ಅನೀಫ್, ರಫೀಕ್, ಗ್ರೀನ್ ಪಾರ್ಕ್ ಹೋಟೆಲ್ ಸಾಲಿ, ಕ.ಸಾ.ಪ. ಕಸಬಾ ಹೋಬಳಿ ಅಧ್ಯಕ್ಷ ಎಂ.ಎಸ್. ನಾಗರಾಜು ಇದ್ದರು.